ADVERTISEMENT

ಜಿಲ್ಲೆಯಲ್ಲಿ 17 ಸಖಿ ಮತಗಟ್ಟೆ

ಜಿಲ್ಲೆಯಲ್ಲಿ ಮಹಿಳಾಸ್ನೇಹಿಯಾದ 17 ಮತಗಟ್ಟೆಗಳು

​ಪ್ರಜಾವಾಣಿ ವಾರ್ತೆ
Published 12 ಮೇ 2018, 8:23 IST
Last Updated 12 ಮೇ 2018, 8:23 IST
ಬಳ್ಳಾರಿಯ ಸರಳಾದೇವಿ ಸತೀಶ್‌ಚಂದ್ರ ಅಗರವಾಲ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಿಂಕ್‌ ಮತಗಟ್ಟೆಯನ್ನು ಪ್ರಾಂಶುಪಾಲ ಪ್ರೊ.ಅಬ್ದುಲ್‌ ಮುತಾಲಿಬ್ ಪರಿಶೀಲಿಸಿದರು.
ಬಳ್ಳಾರಿಯ ಸರಳಾದೇವಿ ಸತೀಶ್‌ಚಂದ್ರ ಅಗರವಾಲ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಿಂಕ್‌ ಮತಗಟ್ಟೆಯನ್ನು ಪ್ರಾಂಶುಪಾಲ ಪ್ರೊ.ಅಬ್ದುಲ್‌ ಮುತಾಲಿಬ್ ಪರಿಶೀಲಿಸಿದರು.   

ಬಳ್ಳಾರಿ: ಶೇ 50ಕ್ಕಿಂತ ಹೆಚ್ಚು ಮಹಿಳಾ ಮತದಾರರು ಇರುವ ಮತಗಟ್ಟೆಗಳನ್ನು ಮಹಿಳಾ ಸ್ನೇಹಿಯನ್ನಾಗಿಸಿ ಸಖಿ (ಪಿಂಕ್‌) ಮತಗಟ್ಟೆಗಳೆಂದೇ ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿ 17 ಪಿಂಕ್‌ ಮತಗಟ್ಟೆಗಳಿವೆ.

ಎಲ್ಲೆಲ್ಲಿ?: ಹಡಗಲಿಯ ತೋಟಗಾರಿಕೆ ಇಲಾಖೆ ಕಚೇರಿ, ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ಶಾಲೆ, ಹೊಸಪೇಟೆಯ ಶ್ರೀರಾಮುಲು ಶಾಲೆ, ವಿವೇಕಾನಂದ ಶಾಲೆ ಮತ್ತು ಹಳೇ ಕೆಇಬಿ ಕಚೇರಿ, ಟಿಬಿ ಡ್ಯಾಂ ಪ್ರದೇಶದಲ್ಲಿರುವ ಲೇಬರ್‌ ಕಾಲೊನಿಯ ಸರ್ಕಾರಿ ಶಾಲೆ, ಅಮರಾವತಿಯ ಸರ್ಕಾರಿ ಶಾಲೆ, ಕಂಪ್ಲಿಯ ಎಂ.ಡಿ.ಕ್ಯಾಂಪ್‌ ಶಾಲೆ, ಸಿರುಗುಪ್ಪದ 26ನೇ ವಾರ್ಡ್‌ನ ಎಸ್‌ಸಿಎಸ್‌ಟಿ ಕಮ್ಯುನಿಟಿ ಹಾಲ್‌, ಬಳ್ಳಾರಿಯ ಕಂಟೋನ್ಮೆಂಟ್‌ ಪ್ರದೇಶದ ಗುಡ್‌ ಶೆಪರ್ಡ್‌ ಶಾಲೆ, ಕೋಟೆ ಪ್ರದೇಶದ ಸೆಂಟ್‌ ಜಾನ್ಸ್‌ ಶಾಲೆ, ಸರಳಾದೇವಿ ಕಾಲೇಜು, ಪಾರ್ವತಿ ನಗರದ ಶಾಂತಿ ಶಿಶು ವಿಹಾರ, ರಾಮನಗರದ ಗಂಗೋತ್ರಿ ಶಾಲೆ, ಬಾಂಬೆ ಪ್ರೆಸ್‌ ರಸ್ತೆಯ ಇನ್‌ಫ್ಯಾಂಟ್‌ ಜೀಸಸ್‌ ಶಾಲೆ, ಸಂಡೂರಿನ ಸರ್ಕಾರಿ ಉರ್ದು ಶಾಲೆ ಮತ್ತು ಕೂಡ್ಲಿಗಿಯ ಪಶು ಆಸ್ಪತ್ರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT