ADVERTISEMENT

ದುಶ್ಚಟ ತ್ಯಜಿಸಿ ಮರಿಮಹಾಂತ ಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 5:55 IST
Last Updated 10 ಜೂನ್ 2013, 5:55 IST
ಮರಿಯಮ್ಮನಹಳ್ಳಿ ಸಮೀಪದ ಜಿ.ನಾಗಲಾಪುರದ ಒಪ್ಪತ್ತೇಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಮ್ಮು, ಕೆಮ್ಮಿಗೆ ನೀಡುವ ಉಚಿತ ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ಮಠದ ಮರಿಮಹಾಂತ ಸ್ವಾಮೀಜಿ ಅವರು ಉಚಿತ ಔಷಧ ವಿತರಣೆಗೆ ಚಾಲನೆ ನೀಡಿದರು
ಮರಿಯಮ್ಮನಹಳ್ಳಿ ಸಮೀಪದ ಜಿ.ನಾಗಲಾಪುರದ ಒಪ್ಪತ್ತೇಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಮ್ಮು, ಕೆಮ್ಮಿಗೆ ನೀಡುವ ಉಚಿತ ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ಮಠದ ಮರಿಮಹಾಂತ ಸ್ವಾಮೀಜಿ ಅವರು ಉಚಿತ ಔಷಧ ವಿತರಣೆಗೆ ಚಾಲನೆ ನೀಡಿದರು   

ಮರಿಯಮ್ಮನಹಳ್ಳಿ: ಯುವಕರು ದುಶ್ಚಟಗಳನ್ನು ತ್ಯಜಿಸಿ ಉತ್ತಮ ಗುಣಗಳನ್ನು ಬೆಳಸಿಕೊಂಡು ಉತ್ತಮ ನಾಗರೀಕರಾಗಿ ಬಾಳುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಕೊಳ್ಳಬೇಕೆಂದು ಜಿ.ನಾಗಲಾಪುರ ಮಠದ ಮರಿಮಹಾಂತ ಸ್ವಾಮೀಜಿ ಸಲಹೆ ನೀಡಿದರು.

ಅವರು ಸಮೀಪದ ಜಿ.ನಾಗಲಾಪುರದ ಒಪ್ಪತ್ತೇಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೃಗಶಿರ ಮಳೆ ಪ್ರವೇಶವಾಗುವ ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವ ದಮ್ಮು, ಕೆಮ್ಮಿಗೆ ನೀಡುವ ಉಚಿತ ಔಷಧ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಅಲ್ಲದೆ ದಮ್ಮು, ಕೆಮ್ಮಿಗೆ ನೀಡುವ ಔಷಧಿಯನ್ನು ಮೂರು ವರ್ಷಗಳ ತನಕ ಪಡೆದು ಈ ರೋಗದಿಂದ ಗುಣಮುಖಹೊಂದುವಂತೆ ತಿಳಿಸಿದರು.

ಹಲವು ವರ್ಷಗಳಿಂದ ಮಠದಲ್ಲಿ ನಡೆಸಿಕೊಂಡು ಬಂದ ಪದ್ಧತಿಯಂತೆ ಈ ಬಾರಿಯೂ ದಮ್ಮು, ಕೆಮ್ಮಿಗೆ ಔಷಧ ನೀಡುತ್ತಿದ್ದು, ವೈದ್ಯರು ಹೇಳಿದಂತೆ ಅಗತ್ಯ ರೀತಿಯ ಸಲಹೆಗಳನ್ನು ಪಾಲಿಸುವಂತೆ ತಿಳಿಸಿದರು.

ಡಾ. ಪೊರಪ್ಪ ಹಾಗೂ ಡಾ.ಶರಣಯ್ಯ, ಗ್ರಾಮ ಮುಖಂಡರಾದ ಆರ್.ಬಸವರಾಜಪ್ಪ, ಬಿ.ಎಂ.ವಿರೂಪಾಕ್ಷಯ್ಯ ಸ್ವಾಮಿ ಮಾತನಾಡಿದರು.

ಮೃಗಶಿರ ಮಳೆ ಪ್ರವೇಶವಾಗುವ ಬೆಳಿಗ್ಗೆ 10.45ಕ್ಕೆ ಸಮಯಕ್ಕೆ ವಿತರಿಸುವ ಬೆಲ್ಲ ಮಿಶ್ರಿತ ಔಷಧವನ್ನು ಪಡೆಯಲು ಜಿಲ್ಲೆಯ ಹೊಸಪೇಟೆ, ಬಳ್ಳಾರಿ, ಸಿರಗುಪ್ಪ, ಕೂಡ್ಲಿಗಿ, ಹೂವಿನಹಡಗಲಿ ಹಗರಿಬೊಮ್ಮನಹಳ್ಳಿ ಸೇರಿಂತೆ ವಿವಿಧ ತಾಲ್ಲೂಕು ಸೇರಿದಂತೆ ದಾವಣಗೆರೆ, ತುಮಕೂರು, ಚಿತ್ರದುರ್ಗ  ಸೇರಿದಂತೆ ಇತರ ಜಿಲ್ಲೆಯ ಅನೇಕ ತಾಲ್ಲೂಕುಗಳಿಂದ ಸುಮಾರು ಐದಾರು ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ದೂರದೂರುಗಳಿಂದ ಕೆಲ ಭಕ್ತರು ಕಳೆದ ರಾತ್ರಿಯೇ ಮಠದಲ್ಲಿ ವಾಸ್ತವ್ಯ ಹೂಡಿ ಬೆಳಿಗ್ಗೆ ಔಷಧಿಯನ್ನು ಪಡೆದರು. ಈ ಹಿಂದೆ ಕಳೆದ ಎಂಟು ವರ್ಷಗಳಿಂದ ಗ್ರಾಮದ ದಿ.ದೊಡ್ಡ ಹನುಮಂತಪ್ಪ ಈ ಔಷಧಿಯನ್ನು ನೀಡುತ್ತಾ ಬಂದಿದ್ದರು.

ಗ್ರಾಮದ ಮುಖಂಡರಾದ ಆರ್.ಬಸವರಾಜಪ್ಪ, ಎಚ್.ಕೊಟ್ರೇಶ್, ಜಿ.ಪಾಲಪ್ಪ, ನಿವೃತ್ತ ಮುಖ್ಯ ಶಿಕ್ಷಕ ರೇವಣಸಿದ್ದಯ್ಯ ಶಾಸ್ತ್ರಿ, ವಿರೂಪಾಕ್ಷಯ್ಯ, ಸಿದ್ಧಲಿಂಗಯ್ಯ, ಪ್ರಕಾಶ್ ಶಾಸ್ತ್ರಿ,  ಬಿ.ಎಂ.ಗಣೇಶಯ್ಯ, ಅನ್ನದಾನಸ್ವಾಮಿ, ಬಿ.ಐಯಜ್ಜ, ಸಿದ್ದಪ್ಪ ಅವಳಿ, ಡಾ. ನಾಗರಾಜ್, ಎಂ.ಬಿ. ಸಿದ್ದನಾಗಪ್ಪ, ಎಚ್.ಎಂ. ನಾಗಯ್ಯಸ್ವಾಮಿ, ಎಚ್.ಕೆ. ರತ್ನಮ್ಮ, ಎಸ್. ವಿದ್ಯಾರಾಣಿ, ಅಕ್ಕನ ಬಳಗದ ಕೆ.ಬಿ.ಎಂ. ಅನಸೂಯಮ್ಮ, ಆರ್.ಚೆನ್ನಮ್ಮ, ಕಲ್ಪನಮ್ಮ, ಬಿ.ಎಂ.ವಾಣಿ, ಕೆ.ಸಿದ್ದಲಿಂಗಪ್ಪ, ಎಚ್.ಎಂ.ಶಿವಮೂರ್ತೆಯ್ಯ, ಪಂಪಯ್ಯ, ಸಿದ್ದಬಸಪ್ಪ ಇತರರಿದ್ದರು.

ನಿವೃತ್ತರಿಗೆ ಸನ್ಮಾನ ಬೀಳ್ಕೊಡುಗೆ
ಹೊಸಪೇಟೆ: ಹೊಸಪೇಟೆಯ ಎಸ್‌ಬಿಎಂ ಶಾಖೆಯಲ್ಲಿ ಸುದೀರ್ಘ 36 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ವಿಶೇಷ ಸಹಾಯಕ ಜೆ.ಎಸ್.ಚವ್ಹಾಣ್ ಅವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು.

ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಉದಯಕುಮಾರ ಮಾತನಾಡಿ, ನಿಸ್ವಾರ್ಥ ಸೇವೆಯ ಚವ್ಹಾಣ್ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಇಂತಹ ಆದರ್ಶಗಳು ಇತರರಿಗೆ ಮಾದರಿಯಾಗಿದೆ ಎಂದು  ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿ, ಬ್ಯಾಂಕ್ ಪರವಾಗಿ ಸನ್ಮಾನಿಸಿದರು.

ಗ್ರಾಹಕರ ಪರವಾಗಿ ಎಚ್.ವೆಂಕಟೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರುಗಳು ಹಾಜರಿದ್ದರು ಮಾತನಾಡಿದರು. ಫೀಲ್ಡ್ ಆಫೀಸರ್ ಉದಯಕುಮಾರ್, ಕಾರ್ಯದರ್ಶಿ ಹರಿಸ್ವರೂಪ ನಾಗರಾಜ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.