ADVERTISEMENT

ನರಸಿಂಗಾಪುರ ಗ್ರಾಪಂ: ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 6:18 IST
Last Updated 7 ಡಿಸೆಂಬರ್ 2012, 6:18 IST

ನರಸಿಂಗಾಪುರ: ತಾಲ್ಲೂಕಿನ ನರಸಿಂಗಾ ಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ನಿರ್ಮಲಾ ಮಂಜುನಾಥ್(ಪರಿಶಿಷ್ಟ ಪಂಗಡ), ಉಪಾಧ್ಯಕ್ಷರಾಗಿ ಉಮಾಪತಿ (ಸಾಮಾನ್ಯ)  ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. 

ಒಟ್ಟು 25 ಸದಸ್ಯರಲ್ಲಿ 24 ಸದಸ್ಯರು ಹಾಜರಿದ್ದು ಏಕಪಕ್ಷೀಯವಾಗಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ  ಬೆಂಬಲ ಸೂಚಿಸಿದರು.
ತಾಲ್ಲೂಕು ಬಿ.ಎಸ್.ಆರ್. ಪಕ್ಷದ ಮುಖಂಡರಾದ  ನವಲೂಟಿ ಗಂಗಣ್ಣ, ಆರ್.ಧನುಂಜಯ, ಎಚ್. ಕುಮಾರ ಸ್ವಾಮಿ, ವಿಜಯ್ ಸಿಂಗ್, ವಿರೇಶ್ ರಣಜಿತ್‌ಪುರ, ಎಂ.ಪಂಪಾಪತಿ ಸರಸಾಪುರ, ಬಿ.ನಾಗರಾಜ್, ರಾಮನ ಗೌಡ್ರು, ಓಬಳೇಶ್, ವೆಂಕಟೇಶಲು, ಸರೋಜಾ ದೇವಿ, ದುರುಗಮ್ಮ, ಕಲ್ಪನ  ಹಾಜರಿದ್ದರು.


ಚುನಾವಣಾ ಅಧಿಕಾರಿಗಳಾಗಿ ತಾಲ್ಲೂಕು ಪಂಚಾಯ್ತಿ ಇ.ಒ. ಈಶ್ವರ್ ಪ್ರಸಾದ್, ವೀರಯ್ಯ ಸ್ವಾಮಿ ಹಾಗೂ  ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ  ತಿಮ್ಮಪ್ಪ,  ಬಿಣಿ ಬಾಯಪ್ಪ ಕಾರ್ಯನಿರ್ವಹಿಸಿದರು.

ಕುಡತಿನಿ ಗ್ರಾ.ಪಂ. ಅಧ್ಯಕ್ಷರಾಗಿ ಹುಲುಗಪ್ಪ
ಬಳ್ಳಾರಿ
: ತಾಲ್ಲೂಕಿನ ಕುಡುತಿನಿ ಗ್ರಾಮ ಪಂಚಾಯ್ತಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಹುಲುಗಪ್ಪ ನೂತನ ಅಧ್ಯಕ್ಷರಾಗಿ, ಲಕ್ಷ್ಮಿದೇವಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT