ADVERTISEMENT

ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ: ವಿಜಯಕುಮಾರ

​ಪ್ರಜಾವಾಣಿ ವಾರ್ತೆ
Published 21 ಮೇ 2012, 5:35 IST
Last Updated 21 ಮೇ 2012, 5:35 IST

ಹೂವಿನಹಡಗಲಿ: ವಾಹನ ಚಾಲನೆ ಯಲ್ಲಿ ನಿರ್ಲಕ್ಷ್ಯವೇ ಅಪಘಾತಕ್ಕೆ ಮೂಲ ಕಾರಣ. ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಬಳಸಿ ಎಂದು ಪಿಎಸ್‌ಐ ವಿಜಯಕುಮಾರ್ ಹೇಳಿದರು.ಪಟ್ಟಣದಲ್ಲಿ ಗುರುಕುಲ ಟ್ಯುಟೋ ರಿಯಲ್ಸ್ ಈಚೆಗೆ ಹಮ್ಮಿಕೊಂಡಿದ್ದ ರಸ್ತೆ ನಿಯಮ ಪಾಲನೆ ಮತ್ತು ಅಪಘಾತ ತಡೆ ಕುರಿತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಸ್ತೆ ನಿಯಮಗಳನ್ನು ಸರಿಯಾಗಿ ಅರಿತುಕೊಂಡು ಪರಿಪಾಲಸಬೇಕು ಸಂಕೇತಗಳನ್ನು ಗುರುತಿಸಿ ಸಂಚರಿಸ ಬೇಕು. ಆಗ ಅಪಘಾತಗಳನ್ನು ತಡೆಗಟ್ಟ ಬಹುದು ಎಂದರು.ಗುರುಕುಲ ಟ್ಯುಟೋರಿಯಲ್ಸ್‌ನ ಅಧ್ಯಕ್ಷ ಬಾವಾಜಿ ಖಾಜಾ ಹುಸೇನ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಸ್ತೆ ನಿಯಮಗಳ ಕಾನೂನು ಉಲ್ಲಂಘನೆ ಯಿಂದ ಅಪಘಾತಗಳು ಹೆಚ್ಚುತ್ತಿವೆ ಎಂದರು.

ಅಪಘಾತದಿಂದ ಅನೇಕ ಜನರ ಜೀವದ ಜೊತೆಗೆ ಆಟವಾಡಿದಂತಾಗು ತ್ತದೆ ಕ್ಷಣಿಕ ಕಾಲದಲ್ಲಿ ನಡೆದ ಅನಾಹುತ ಜೀವನ ಪೂರ್ತಿ ಅನುಭವಿಸುವ ಪರಿಸ್ಥಿತಿ ಬರುತ್ತದೆ ಎಂದರು. ಹಾಲೇಶ್, ಹರೀಶ್, ಸಿದ್ದೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.