ADVERTISEMENT

ಪ್ರಕಾಶ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 5:10 IST
Last Updated 4 ಜೂನ್ 2011, 5:10 IST

ಹೂವಿನ ಹಡಗಲಿ: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರ ವಾಗಿ ನಡೆಸ ಬೇಕೆಂಬುದು ದಿ.ಎಂ.ಪಿ. ಪ್ರಕಾಶ್‌ರ ಕನಸಾಗಿತ್ತು ಎಂದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಪಿ. ರವೀಂದ್ರ ಹೇಳಿದರು.

ಪಟ್ಟಣದ ಜಿಬಿಆರ್ ಆವರಣದಲ್ಲಿ ದಿ.ಎಂ.ಪಿ.ಪ್ರಕಾಶ್ ಸ್ಮರಣಾರ್ಥ ಅಪ್ಪು ಕ್ರಿಕೇಟ್‌ರ್ಸ್‌ ವತಿಯಿಂದ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಎಂ.ಪಿ.ಪ್ರಕಾಶ್ ಟ್ರೋಫಿ ಹಾರ್ಡ್ ಟೆನಿಸ್ ಬಾಲ್ ಓಪನ್ ಕ್ರಿಕೇಟ್ ಟೂರ್ನ್‌ಮೆಂಟ್ ಮುಕ್ತಾಯ ಸಮಾರಂಭದಲ್ಲಿ ಬಹು ಮಾನ ವಿತರಿಸಿ ಅವರು ಮಾತನಾಡಿ ದರು.

ರಂಗಭಾರತಿಯ ನಾಲ್ಕನೆ ತಲೆ ಮಾರಿನ ಯುವಕರು ಅತ್ಯಂತ ಶಿಸ್ತಿನಿಂದ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಎಂ.ಪಿ.ಪ್ರಕಾಶರ ಸ್ಮರಣಾರ್ಥ ಹಮ್ಮಿ ಕೊಂಡಿರುವ ಕಾರ್ಯಕ್ರಮದಿಂದ ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದರು.

ಎಂ.ಪಿ.ಪ್ರಕಾಶರವರು 1964ರಲ್ಲಿ ರಂಗಭಾರತಿ ಎಂಬ ಹವ್ಯಾಸಿ ಕಲಾತಂಡ ವನ್ನು ಕಟ್ಟಿಕೊಂಡು ಹಳ್ಳಿ-ಪಟ್ಟಣ ಗಳನ್ನು    ಸುತ್ತಿ ನಾಟಕಗಳನ್ನಾಡುತ್ತಾ  ಒಂದು ಅಭಿರುಚಿಯನ್ನು ಬೆಳೆಸಲು ಕಾರಣರಾಗಿದ್ದಾರೆ    ಎಂದರು.

ಪಟ್ಟಣದಲ್ಲಿ  ಕ್ರೀಡೆ, ಸಾಹಿತ್ಯ, ಆರೋಗ್ಯ ಹೀಗೆ ಎಲ್ಲಾ ರಂಗಗಳ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಾಂಸ್ಕೃತಿಕ ಲೋಕ ವನ್ನು ಸೃಷ್ಟಿಸಿ ಹೋಗಿದ್ದಾರೆ ಎಂದರೆ ಅತೀಯೋಶಕ್ತಿ ಯಾಗಲಾರದು ಎಂದರು.
ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ  ಗುರುವಿನ ಕೊಟ್ರಯ್ಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿ.ಪಂ.ಮಾಜಿ ಸದಸ್ಯ ದೂದಾ ನಾಯ್ಕ ಮಾತನಾಡಿದರು. ಜಿ.ಪಂ. ಸದಸ್ಯ ವಸಂತ, ನಳಿನಾ ವೀರಭದ್ರಪ್ಪ, ಪುರಸಭೆ ಅಧ್ಯಕ್ಷ  ಅರವಳ್ಳಿ ವೀರಣ್ಣ, ಎಂ.ಪರಮೇಶ್ವರಪ್ಪ, ನರಸಿಂಹಪ್ಪ ದಿವಾಕರ್, ರಾಘವೇಂದ್ರ ರಾಯ್ಕರ್, ಕಪಾಲಿ ರಾಜ್‌ಪೀರಸಾಬ್, ಪುರಸಭೆ ಉಪಾಧ್ಯಕ್ಷ ಪರಶೆಟ್ಟಿ ಪ್ರಕಾಶ್,ತಾ.ಪಂ.ಉಪಾಧ್ಯಕ್ಷೆ ಮಂಗಳಾ ಹಾಲೇಶ, ಜಿ.ಬುಳ್ಳಪ್ಪ, ಅಟವಾಳಿಗಿ ಕೊಟ್ರೇಶ್, ವಾರದಗೌಸ್‌ಮೋಹಿ ದ್ದೀನ್, ಮುದುಕಪ್ಪ, ಸುರೇಶ ಶಿವಪುರ, ಎಸ್.ಎಂ.ಪದ್ಮನಾಭಶೆಟ್ಟಿ ಉಪಸ್ಥಿತ ರಿದ್ದರು.

ರಾಣೆಬೆನ್ನೂರಿನ ಅಲ್ಲಾಮೀನ್ ಕ್ರಿಕೆಟ್ ತಂಡ ಪ್ರಥಮ ಸ್ಥಾನ ಪಡೆದು 25ಸಾವಿರರೂಗಳ ನಗಧು ಹಾಗೂ ಆಕರ್ಷಕ ಟ್ರೋಫಿ ಪಡೆದರು. ಹೊಸ ಪೇಟೆಯ ಜೆಎನ್‌ಬಿ ತಂಡ ದ್ವಿತೀಯ ಸ್ಥಾನ ಪಡೆದು 15ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದರು.

ಕ್ರಿಕೇಟ್‌ರ್ಸ್‌ನ ರಾಘವೇಂದ್ರ, ಹಣ್ಣಿ ವೀರೇಶ, ಮಹಾದೇವ, ವಿಲ್ಸನ್‌ಸ್ವಾಮಿ, ನಾಗರಾಜ. ಅನಿಲ್‌ಪಾಷಾ, ಲೋಹಿತ,ಬಸವರಾಜ, ಶೇಖರಬಾಬು, ಪುನೀತ, ಜಲ್‌ಸನ್‌ಗುರು, ಕೊಟ್ರೇಶ್ ಮತ್ತು ವಾಲಿಗುರು  ಸತತ 10 ದಿನಗಳ ಕ್ರಿಕೆಟ್ ಟೂನ್‌ಮೆಂಟ್‌ನ್ನು ಯಶಸ್ವಿ ಯಾಗಿ ನಡೆಸಲು ಶ್ರಮಿಸಿ ಸಾರ್ವಜ ನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಕಾಶ್ ಜೈನ್ ಪ್ರಾರ್ಥನೆ ಹಾಡಿದರು. ಶಂಕರ ಸ್ವಾಗತಿಸಿದರು. ದ್ವಾರಕೇಶರೆಡ್ಡಿ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.