ಹೊಸಪೇಟೆ: ಹೊಸಪೇಟೆ ತಾಲ್ಲೂಕು ಕಡ್ಡಿರಾಮಪುರ ಬಳಿ ಓಡಾಡುತ್ತಿದ್ದ ಮೂರು ವರ್ಷದ ಹೆಣ್ಣು ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಈ ಕುರಿತಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನರಲ್ಲಿ ಉಂಟಾಗಿದ್ದ ಭಯವನ್ನು ನಿವಾರಿಸಿದ್ದಾರೆ.
ಹೊಲವೊಂದರಲ್ಲಿ ಕಳೆದ ಹಲವಾರು ದಿನಗಳಿಂದ ಚಿರತೆ ಹಾವಳಿಯಾಗುತ್ತಿದೆ, ದನ ಕರಗಳು ಸೇರಿದಂತೆ ಕುರಿಗಳನ್ನು ತಿಂದು ಹಾಕುತ್ತಿದೆ ಎಂಬ ಮಾಹಿತಿಯ ಅನ್ವಯ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯಲು ಬಲೆ ಬೀಸಿದ್ದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಹೊಲವೊಂದರಲ್ಲಿ ಚಿರತೆಗಾಗಿ ಬೋನ್ ಇಟ್ಟಿದ್ದು, ಬುಧವಾರ ರಾತ್ರಿ 3 ವರ್ಷದ ಹೆಣ್ಣು ಚಿರತೆಯೊಂದು ಸಿಕ್ಕುಬಿದ್ದಿದ್ದೆ. ವಿಷಯ ಅರಿಯುತ್ತಲೇ ಸಾರ್ವಜನಿಕರು ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದರು. ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಡುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.