ADVERTISEMENT

ಬಳ್ಳಾರಿ ನಗರ ಕ್ಷೇತ್ರ: ಎಂಸಿಸಿ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 6:26 IST
Last Updated 8 ಏಪ್ರಿಲ್ 2013, 6:26 IST

ಬಳ್ಳಾರಿ: ಮುಂಬರುವ ವಿಧಾನಸಬೆ ಚುನಾವಣೆಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಮಾದರಿ ನೀತಿ ಸಂಹಿತೆ (ಎಂಸಿಸಿ) ತಂಡ ರಚಿಸಿ ಮೇಲುಸ್ತುವಾರಿ ಅಧಿಕಾರಿಗಳನ್ನು ನೇಮಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ.

ಎಂಸಿಸಿ ತಂಡ, ಫ್ಲೈಯಿಂಗ್ ಸ್ಕ್ವಾಡ್, ಡೆಡಿಕೇಟೆಡ್ ಫ್ಲೈಯಿಂಗ್ ಸ್ಕ್ವಾಡ್‌ನ ಎರಡು 2 ತಂಡಗಳನ್ನು ರಚಿಸಲಾಗಿದ್ದು, ಸಾರ್ವಜನಿಕರು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿತ ದೂರುಗಳನ್ನು ಈ ತಂಡದ ಅಧಿಕಾರಿಗಳಿಗೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ತಂಡದ ಮುಖ್ಯಸ್ಥರನ್ನಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಖಾಜಿ ನಫೀಸಾ (ಮೊಬೈಲ್ ದೂರವಾಣಿ ಸಂಖ್ಯೆ 97417- 59475)  ಬಳ್ಳಾರಿ ನಗರ ಡಿವೈಎಸ್‌ಪಿ ಮುರುಗಣ್ಣನವರ್ (94808- 03020), ಕೆಎಸ್‌ಎಫ್‌ಸಿ ಸಹಾಯಕ ನಿರ್ದೇಶಕ ಬಸವರಾಜ್ (94491- 72102), ಕಾರ್ಮಿಕ ಅಧಿಕಾರಿ  ಎ.ಎಂ. ಕೃಷ್ಣಮೂರ್ತಿ (82770- 94753), ಮೋಟಾರ್ ವಾಹನ ಪರಿವೀಕ್ಷಕ ಶರಣಪ್ಪ (94823- 30307), ಅಬಕಾರಿ ಪರಿವೀಕ್ಷಕ ಚಿಕ್ಕರೆಡ್ಡಿ (98862- 96936), ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ವೆಂಕಟೇಶ್ ಮೂರ್ತಿ (82771- 50143) ಅವರನ್ನು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಎಂಸಿಸಿ ತಂಡಕ್ಕೆ ನಿಯೋಜಿಸಲಾಗಿದೆ.

ಫ್ಲೈಯಿಂಗ್ ಸ್ಕ್ವಾಡ್ ತಂಡದಲ್ಲಿ ವಾರ್ಡ್‌ವಾರು ಅಧಿಕಾರಿಗಳನ್ನು ನೇಮಿಸಲಾಗಿದ್ದು, ವಾರ್ಡುವಾರು ದೂರುಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಬಹುದು.  ಉದ್ಯೋಗ ವಿನಿಮಯ ಅಧಿಕಾರಿ ಹಟ್ಟೆಪ್ಪ- 99456- 02881 (ವಾರ್ಡ್ ಸಂಖ್ಯೆ: 31, 32, 33, 34), ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್  ಯೂನಿಸ್ ಪಾಶ- 94808- 13141 (ವಾರ್ಡ್: 1, 21, 22, 25), ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿಜಿನಿಯರ್ ರವಿಶಂಕರ್- 94486- 34799 (ವಾರ್ಡ್: 17, 18, 19, 20), ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ- 94486- 34799 (ವಾರ್ಡ್: 9, 13, 14, 15, 16, 17), ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ  ರಾಜು ಬಾವಿಹಳ್ಳಿ- 81050- 31176 (ವಾರ್ಡ್: 7, 8, 10, 11, 12), ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದೇವರಾಜ್- 99720- 96720 (ವಾರ್ಡ್: 5, 6), ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್-98451- 24205 (ವಾರ್ಡ್: 2, 3, 4).

ಇತರೆ ವಾರ್ಡ್‌ಗಳಿಗೆ ಸಂಬಂಧಿಸಿದ ದೂರುಗಳನ್ನು ಡೆಡಿಕೇಟೆಡ್ ಫ್ಲೈಯಿಂಗ್ ಸ್ಕ್ವಾಡ್-1 ತಂಡದಲ್ಲಿರುವ ಪಾಲಿಕೆಯ ಕಂದಾಯ ಉಪ ಆಯುಕ್ತ ಅರಿಫುದ್ದೀನ್ (94486- 32234), ಎಆರ್‌ಓ  ವಿರೂಪಾಕ್ಷಪ್ಪ (94483- 77655), ಆರ್.ಐ. ಕೃಷ್ಣಮೂರ್ತಿ (94480- 03870) ಹಾಗೂ  ಡೆಡಿಕೇಟೆಡ್ ಫ್ಲೈಯಿಂಗ್ ಸ್ಕ್ವಾಡ್-2 ತಂಡದಲ್ಲಿರುವ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ಮನೋಜ್ (98455- 89606), ಕೆಯುಐಡಿಎಫ್‌ಸಿಯ ಸಹಾಯಕ ಎಂಜಿನಿಯರ್  ನಾಗರಾಜ್ (94490- 75490) ಅವರಿಗೆ ಸಲ್ಲಿಸಬಹುದು. ಸಾರ್ವಜನಿಕರು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ದೂರುಗಳನ್ನು ಸಲ್ಲಿಸಲು ಮೇಲ್ಕಂಡ ತಂಡದ ಅಧಿಕಾರಿಗಳ ದೂರವಾಣಿ   ಇಲ್ಲವೇ ಖುದ್ದಾಗಿ   ಅಥವಾ ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ (08392) 273229, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಸಹಾಯವಾಣಿ ಸಂಖ್ಯೆ (08392) 272356  ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.