ADVERTISEMENT

ಬಳ್ಳಾರಿ: ಬಿಜೆಪಿಗೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2011, 10:55 IST
Last Updated 5 ಜನವರಿ 2011, 10:55 IST

ಬಳ್ಳಾರಿ: ಬಳ್ಳಾರಿ ತಾಲ್ಲೂಕು ಪಂಚಾಯಿತಿಯ 31 ಕ್ಷೇತ್ರಗಳಲ್ಲಿ 20ರಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು,  ಜೆಡಿಎಸ್ ಎಂಟು ಕ್ಷೇತ್ರಗಳಲ್ಲಿ ಗೆದ್ದು ಅಚ್ಚರಿ ಮೂಡಿಸಿದೆ. ಕೇವಲ ಮೂರು ಸ್ಥಾನಗಳಲ್ಲಿ ಮಾತ್ರ ಜಯ ಗಳಿೆರುವ ಕಾಂಗ್ರೆಸ್ ನಿರಾಸೆ ಅನುಭವಿಸಿದೆ. ಇದೇ 26ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಯ ಗಳಿಸಿರುವ ಅಭ್ಯರ್ಥಿಗಳ ಕ್ಷೇತ್ರ, ಪಕ್ಷವಾರು ವಿವರ ಈ ಕೆಳಕಂಡಂತಿದೆ.

ನೆಲ್ಲುಡಿ: ಲಕ್ಷ್ಮಿ ದೇವಿ (ಜೆಡಿಎಸ್); ಎಮ್ಮಿಗನೂರು: ಜೆ. ನಾಗರತ್ನ (ಜೆಡಿಎಸ್); ಕಲ್ಲುಕಂಬ: ರಾಮಾ ನಾಯ್ಡು (ಬಿಜೆಪಿ); ಎಚ್.ವೀರಾಪುರ: ಎಚ್. ಜಡೆಮ್ಮ (ಜೆಡಿಎಸ್); ಸಿಂಧಿಗೇರಿ: ಗೋಪಾಲ (ಬಿಜೆಪಿ); ಕುರುಗೋಡು- 1: ಹುಲುಗಪ್ಪ (ಜೆಡಿಎಸ್); ಕುರುಗೋಡು- 2: ಕೆ.ಎನ್. ಭಾಗ್ಯಲಕ್ಷ್ಮಿ (ಕಾಂಗ್ರೆಸ್);  ಸಿದ್ದಮ್ಮನಹಳ್ಳಿ: ಮರೆಮ್ಮ (ಬಿಜೆಪಿ); ಬಾದನಹಟ್ಟಿ: ನಾರಾಯಣ ರೆಡ್ಡಿ (ಬಿಜೆಪಿ); ಸೋಮಸಮುದ್ರ: ಕೆ.ಬಿ. ಬಸವರಾಜ (ಬಿಜೆಪಿ); ಕುಡುತಿನಿ: ಹುಚ್ಚಮ್ಮ (ಕಾಂಗ್ರೆಸ್); ಕೊಳಗಲ್ಲು: ವಡ್ಡರ ಪೆದ್ದಕ್ಕ (ಬಿಜೆಪಿ); ಕೋಳೂರು: ಹನುಮಂತಪ್ಪ (ಬಿಜೆಪಿ); ಕೊರ್ಲಗುಂದಿ: ಮೂಕಮ್ಮ (ಬಿಜೆಪಿ); ಮೋಕ: ಹೊನ್ನೂರ ತಿಮ್ಮಕ್ಕ (ಬಿಜೆಪಿ); ಬಸರಕೋಡು: ಎಚ್.ಎಂ. ಶಂಕರಮ್ಮ (ಜೆಡಿಎಸ್); ಕಪ್ಪಗಲ್: ಗಂಗಮ್ಮ (ಜೆಡಿಎಸ್);

ಶ್ರೀಧರಗಡ್ಡೆ: ಅರುಣಜ್ಯೋತಿ (ಬಿಜೆಪಿ); ಪರಮದೇವನಹಳ್ಳಿ: ವಿ.ವಿರೂಪಾಕ್ಷ (ಬಿಜೆಪಿ); ಯರ್ರಗುಡಿ: ಜಯರಾಮ ರೆಡ್ಡಿ (ಬಿಜೆಪಿ); ಕಾರೆಕಲ್ಲು: ವೈ.ಎಸ್. ಮಾದವರೆಡ್ಡಿ (ಬಿಜೆಪಿ); ಅಸುಂಡಿ: ಉಮಾದೇವಿ (ಬಿಜೆಪಿ); ರೂಪನಗುಡಿ: ಮಹಬೂಬೀ (ಜೆಡಿಎಸ್); ಯತ್ತಿನಬೂದಿಹಾಳ್: ಮಾರೆಪ್ಪ ಹಳ್ಳಿ (ಬಿಜೆಪಿ); ಹಲಕುಂದಿ: ಆಲಂ ಬಾಷಾ (ಕಾಂಗ್ರೆಸ್); ಬೆಳಗಲ್ಲು: ಜಡೇಗೌಡ (ಬಿಜೆಪಿ); ಬೈರದೇವನಹಳ್ಳಿ: ರಾಧಮ್ಮ (ಬಿಜೆಪಿ); ಸಂಜೀವರಾಯನಕೋಟೆ: ವಿ.ಗಾದಿಲಿಂಗಪ್ಪ (ಬಿಜೆಪಿ); ಸಿಂಧುವಾಳ: ಧರ್ಮಣ್ಣ (ಬಿಜೆಪಿ); ವಣೇನೂರು: ನಾಗರಾಜ (ಬಿಜೆಪಿ); ಗೆಣಿಕೆಹಾಳ್: ದ್ಯಾವಮ್ಮ (ಜೆಡಿಎಸ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.