ADVERTISEMENT

ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 11:00 IST
Last Updated 3 ಮಾರ್ಚ್ 2011, 11:00 IST

ಬಳ್ಳಾರಿ: ಎಲ್ಲ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸಬೇಕು ಎಂದು ಮಹಾನಗರ ಪಾಲಿಕೆ ಉಪಮೇಯರ್ ತೂರ್ಫು ಯಲ್ಲಪ್ಪ ಸಲಹೆ ನೀಡಿದರು.ತಾಲ್ಲೂಕಿನ ಅಲ್ಲೆಪುರ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಿದರೆ ಅವರನ್ನು ದೇಶದ ಆಸ್ತಿಯನ್ನಾಗಿಸಬಹುದು. ಶಿಕ್ಷಣದಿಂದ ಅವರು ತಮ್ಮದೇ ಆದ ಬದುಕು ಕಟ್ಟಿಕೊಳ್ಳುವ ಸಾಮರ್ಥ್ಯವನ್ನೂ ಹೊಂದುತ್ತಾರೆ ಎಂದು ಅವರು ತಿಳಿಸಿದರು.

ಶಿಕ್ಷಕರು ಮಕ್ಕಳ ಭವಿಷ್ಯದ ಮಾರ್ಗದರ್ಶಕರಾಗಿ, ಆಸಕ್ತಿವಹಿಸಿ, ಗುಣಮಟ್ಟದ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಪಾಲಕರ ಪ್ರೋತ್ಸಾಹ ಅಗತ್ಯ ಎಂದು ಅವರು ಹೇಳಿದರು.ಎಸ್‌ಡಿಎಂಸಿ ಅಧ್ಯಕ್ಷ ವಿ.ಎಚ್. ಪೊಂಪಾಪತಿ, ಕೆ.ಬಸಪ್ಪ, ಕೆ.ಹೊನ್ನೂರಪ್ಪ, ಕೆ.ಗಾದಿಲಿಂಗಪ್ಪ, ಕೆ.ವೆಂಕಟೇಶಪ್ಪ, ಡಿ.ಎಸ್. ವೆಂಕಟರೆಡ್ಡಿ, ಪಾಲ್ತೂರು ಬಸವ ರಾಜ, ತೂರ್ಪು ವೆಂಕಟೇಶ, ತೂರ್ಫು ಅಂಜಿನಿ, ವಿ.ದುರ್ಗಣ್ಣ, ಕೆ.ಎಸ್. ಸಿದ್ಧಲಿಂಗಪ್ಪ. ತೂರ್ಫು ನಾರಾಯಣ, ಕೆ.ನಾಗರಾಜ, ವಿ.ನಾಗರಾಜ, ಕೆ.ಮಾರೆಣ್ಣ, ಶಿಕ್ಷಕಿಯರಾದ ಲಕ್ಷ್ಮಿ, ಸವಿತಾ, ಜೆ.ಭವಾನಿ, ವಿ.ಆರ್. ರೂಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.