ADVERTISEMENT

ಮದ್ಯವರ್ಜನೆ ಶಿಬಿರದಿಂದ ತಪ್ಪಿಸಿಕೊಂಡು ಹೋಗುವಾಗ ಬಂಡೆ ಮಧ್ಯೆ ಸಿಲುಕಿ ನರಳಾಡಿದ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 6:17 IST
Last Updated 24 ಜೂನ್ 2019, 6:17 IST
   

ಹೊಸಪೇಟೆ: ಮದ್ಯ ವರ್ಜನೆ ಶಿಬಿರದಿಂದ ಶಿಬಿರಾರ್ಥಿಯೊಬ್ಬರು ತಪ್ಪಿಸಿಕೊಳ್ಳಲು ಹೋಗಿ ತಾಲ್ಲೂಕಿನ ಹಂಪಿಯ ಬಂಡೆಗಲ್ಲುಗಳ ಮಧ್ಯೆ ನಾಲ್ಕು ಗಂಟೆಗೂ ಹೆಚ್ಚು ಸಮಯ ಸಿಲುಕಿಕೊಂಡು ನರಳಾಡಿದ್ದಾರೆ.

ಹಂಪಿಯ ಕಡಲೆಕಾಳು ಗಣಪ ಸ್ಮಾರಕ ಹಿಂಭಾಗದ ಶಿವರಾಮ ಅವಧೂತರ ಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮದ್ಯವರ್ಜನೆ ಶಿಬಿರ ಆಯೋಜಿಸಲಾಗಿದೆ. ಅದರಲ್ಲಿ ಒಟ್ಟು 60 ಜನ ಪಾಲ್ಗೊಂಡಿದ್ದಾರೆ.

ಕೊಪ್ಪಳ ಜಿಲ್ಲೆ ಹುಲಿಗಿಯ ದೇವೇಂದ್ರಪ್ಪ (30) ಎಂಬ ಯುವಕ ಕೂಡ ಪಾಲ್ಗೊಂಡಿದ್ದ. ಸೋಮವಾರ ಬೆಳಿಗ್ಗೆ ಏಕಾಏಕಿ ಶಿಬಿರದಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಬಂಡೆಗಲ್ಲುಗಳ ಮಧ್ಯೆ ಸಿಲುಕಿಕೊಂಡಿದ್ದಾನೆ. ವಿಷಯ ತಿಳಿದು ಸ್ಥಳೀಯ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಯುವಕನನ್ನು ರಕ್ಷಿಸಿದ್ದಾರೆ. ಯುವಕನನ್ನು ನಗರದ‌ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.