ADVERTISEMENT

ಮನಸೂರೆಗೊಂಡ ಬಬ್ರುವಾಹನ ಕಾಳಗ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 4:35 IST
Last Updated 25 ಜನವರಿ 2012, 4:35 IST

ಡಣಾಪುರ-114 (ಮರಿಯಮ್ಮನ ಹಳ್ಳಿ): ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರಿಶಿಷ್ಟ ಪಂಗಡ ಪ್ರಾಯೋಜಿತ ಕಾರ್ಯಕ್ರಮ ದಡಿಯಲ್ಲಿ ಪಟ್ಟಣದ ಕೆ.ಲಕ್ಷ್ಮಣ ತಂಡದವರು ಶನಿವಾರ ಸಂಜೆ ಪ್ರದರ್ಶಿಸಿದ `ಬಬ್ರುವಾಹನ ಕಾಳಗ~ ಬಯಲಾಟ ನೋಡುಗರ ಮನಸೂರೆಗೊಂಡಿತು.

 ಗ್ರಾಮದ ಪುಟ್ಟರಾಜ ಗವಾಯಿಗಳ ರಂಗಮಂದಿರಲಲ್ಲಿ ತಂಡದ ಕೆ.ವೆಂಕಣ್ಣ ಅವರು ಬಬ್ರುವಾಹನನ ಹಾಗೂ ಭರಮಪ್ಪ ಅರ್ಜುನನ ಪಾತ್ರದಲ್ಲಿನ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಯಿತು.

ರಾಮಚಂದ್ರಪ್ಪ ಧರ್ಮರಾಯ ನಾಗಿ ಅಭಿನಯಿಸಿದರೆ, ಚಿತ್ರಾಂಗದೆ ಯಾಗಿ ಗೊಲ್ಲರಹಳ್ಳಿಯ ಎನ್.ಪವಿತ್ರ, ಕೃಷ್ಣನ ಪಾತ್ರಧಾರಿಯಾಗಿ ಯು. ನಾಗಪ್ಪ, ಎಂ.ಹನುಮಂತ  ಋಷಿಕೇತು ನಾಗಿ, ಸಾರಥಿಯಾಗಿ ದೊಡ್ಡ ಜಡಿಯಪ್ಪ ಅವರ ಅಭಿನಯಿಸಿದರು.

ಅಂಜಿನಪ್ಪ ಕ್ಯಾಷಿಯೋ ನುಡಿದರೆ, ಯರಿಸ್ವಾಮಿ ಹಾರ‌್ಮೋನಿಯಂ, ತಿಪ್ಪೇ ಸ್ವಾಮಿ ಮದ್ದಳೆ ನುಡಿಸಿದರು. ಕೆ.ಪಂಪಣ್ಣ ಭಾಗವತರಾಗಿ ಕಾರ್ಯ ನಿರ್ವಹಿಸಿದರೆ, ಹೇಮರೆಡ್ಡಿ, ಕೆ. ಸಂಗಪ್ಪ, ಎಂ.ಹನುಮಂತ, ಕೆ.ತಿಪ್ಪಣ್ಣ, ಈ.ಸಿದ್ದಪ್ಪ ಹಿಮ್ಮೇಳ ಸಂಗೀತ ನುಡಿಸಿದರು. ವಸ್ತ್ರವಿನ್ಯಾಸ ಹಾಲೇಶ್, ಬಿ.ರಾಘವೇಂದ್ರ ಧ್ವನಿ ಮತ್ತು ಬೆಳಕು ನಿರ್ವಹಿಸಿದರು.

ಇದಕ್ಕೂ ಮುಂಚೆ ಎನ್.ಪವಿತ್ರ ಗೊಲ್ಲರಹಳ್ಳಿ ಅವರಿಂದ ರಂಗಗೀತೆ ಗಳ ಗಾಯನ ಜರುಗಿತು. ಡಿ.ಎಂ. ಎರಿಸ್ವಾಮಿ ಹಾರ‌್ಮೋನಿಯಂ ನುಡಿಸಿ ದರೆ, ತಿಪ್ಪೇಸ್ವಾಮಿ ತಬಲಾ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.