ADVERTISEMENT

ಮನುಷ್ಯರ ಮೂತ್ರದಿಂದ ದ್ರವರೂಪದ ರಸಗೊಬ್ಬರ

‘ಯೂರಿನ್ ಟು ಯೂರಿಯಾ’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 9:12 IST
Last Updated 6 ಜೂನ್ 2017, 9:12 IST
ಬಳ್ಳಾರಿಯ ಇನ್‌ಫೆಂಟ್ರಿ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ‘ಯೂರಿನ್ ಟು ಯೂರಿಯಾ’ ಪರಿಸರ ಸ್ನೇಹಿ ಮೂತ್ರಾಲಯ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಅಧಿಕಾರಿಗಳಿಗೆ ಸಲಹೆ ನೀಡಿದರು. ಪಾಲಿಕೆ ಆಯುಕ್ತ ಎಂ.ಕೆ.ನಲ್ವಡಿ, ಕೆಮಿಕಲ್ ಎಂಜಿನಿಯರ್‌ ಜಾಲಿ ಜಂಬಣ್ಣ ಇದ್ದಾರೆ.
ಬಳ್ಳಾರಿಯ ಇನ್‌ಫೆಂಟ್ರಿ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ‘ಯೂರಿನ್ ಟು ಯೂರಿಯಾ’ ಪರಿಸರ ಸ್ನೇಹಿ ಮೂತ್ರಾಲಯ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಅಧಿಕಾರಿಗಳಿಗೆ ಸಲಹೆ ನೀಡಿದರು. ಪಾಲಿಕೆ ಆಯುಕ್ತ ಎಂ.ಕೆ.ನಲ್ವಡಿ, ಕೆಮಿಕಲ್ ಎಂಜಿನಿಯರ್‌ ಜಾಲಿ ಜಂಬಣ್ಣ ಇದ್ದಾರೆ.   

ಬಳ್ಳಾರಿ: ಸ್ವಚ್ಛ ಭಾರತ ಯೋಜನೆ ಅಡಿ ಪರಿಸರ ಸ್ನೇಹಿಯಾದ ಮತ್ತು ರೈತರಿಗೆ ಅನುಕೂಲಕರವಾದ ಮೂತ್ರಾಲಯಗಳ ನಿರ್ಮಾಣದತ್ತ ಜಿಲ್ಲಾಡಳಿತ ಹೆಜ್ಜೆ ಹಾಕಿದ್ದು, ‘ಯೂರಿನ್ ಟು ಯೂರಿಯಾ’ ಪ್ರಾಯೋಗಿಕ ಯೋಜನೆಗೆ ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ರಾಮ ಪ್ರಸಾದ್‌ ಮನೋಹರ್‌ ಚಾಲನೆ ನೀಡಿದರು.

ಮನುಷ್ಯರ ಮೂತ್ರದಲ್ಲಿರುವ ಅತ್ಯಧಿಕ ಪ್ರಮಾಣದ ನೈಟ್ರೋಜನ್ ಅನ್ನು ದ್ರವರೂಪದ ರಸಗೊಬ್ಬರವಾಗಿ (ಲಿಕ್ವಿಡ್ ಫರ್ಟಿಲೈಸರ್) ಪರಿವರ್ತಿಸಿ ರೈತರಿಗೆ ವಿತರಿಸಲು ಯೋಜನೆ ರೂಪಿಸಲಾಗಿದೆ.

ನಗರದ ಎಸ್ಪಿ ವೃತ್ತ ಸಮೀಪದ ಇನ್‌ಫೆಂಟ್ರಿ ರಸ್ತೆಯಲ್ಲಿ ಸೋಮವಾರ ವಿಶಿಷ್ಟ ರೀತಿಯ ಮೂತ್ರಾಲಯವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ, ‘ಮೂತ್ರದ ಪ್ರತಿ ಲೀಟರ್‌ನಲ್ಲಿ 9.38ಗ್ರಾಂ ನೈಟ್ರೋ ಜನ್, 1.8 ಗ್ರಾಂ ಕ್ಲೋರೈಡ್, 1.18ಗ್ರಾಂ ಸೋಡಿಯಂ, 1.08ಗ್ರಾಂ ಪೋಟ್ಯಾ ಶಿಯಂ ಮತ್ತು 0.78ಗ್ರಾಂ ಕ್ರಿಯಾಟಿನ್ ಇದ್ದು, ಅವುಗಳನ್ನು ವ್ಯರ್ಥವಾಗಿಸು ವುದರ ಬದಲು ದ್ರವ ರಸಗೊಬ್ಬರವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ  ಎಂದರು.

ADVERTISEMENT

ಪಾಲಿಕೆ ಸಹಯೋಗದಲ್ಲಿ ಇದೇ ಮಾದರಿಯಲ್ಲಿ ನಗರದಾದ್ಯಂತ ಮೂತ್ರಾಲಯಗಳ ವ್ಯವಸ್ಥೆ ಮಾಡಲು ತೀರ್ಮಾ ನಿಸಲಾಗಿದೆ. ಅದಕ್ಕೆ ಬೇಕಾದ ಅನುದಾನವನ್ನು ಜಿಲ್ಲಾಡಳಿತ ಕಲ್ಪಿಸಲಿದ್ದು, ಸಮಗ್ರ ವರದಿಯನ್ನು ಸಲ್ಲಿಸುವಂತೆ ಸ್ಥಳದಲ್ಲಿದ್ದ ಹೊಸಪೇಟೆಯ ಕೊಟ್ಟೂರೇಶ್ವರ ಎಂಟರ್‌ಪ್ರೈಸಸ್‌ನ ಕೆಮಿಕಲ್‌ ಎಂಜಿನಿಯರ್‌ ಜಾಲಿ ಜಂಬಣ್ಣ ಅವರಿಗೆ ಸೂಚಿಸಿದರು.

ಗಮನ ಸೆಳೆಯಲಿ: ಮೂತ್ರಾಲಯ ಜನರ ಗಮನ ಸೆಳೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸ್ಥಳದಲ್ಲಿ ನೆಲವನ್ನು ಸಮತಟ್ಟುಗೊಳಿಸಬೇಕು. ಕೊಠಡಿ ಮಾದರಿಯಲ್ಲಿ ತಗಡಿನ ಮೇಲ್ಛಾವಣಿ ಹೊದಿಸಬೇಕು, ಅಕ್ಕಪಕ್ಕ ತಗಡು ಗೋಡೆಗಳನ್ನು ನಿರ್ಮಿಸಬೇಕು. ಉಚಿತ ಮೂತ್ರಾಲಯ ಎಂಬ ನಾಮಫಲಕವನ್ನು ಅಳವಡಿಸ ಬೇಕು ಎಂದು ಪಾಲಿಕೆ ಆಯುಕ್ತಎಂ.ಕೆ.ನಲ್ವಡಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಇದೇ ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಅವರು ಹೊಸ ಬಗೆ ಮೂತ್ರಾಲಯವನ್ನು ಬಳಸಿ ಸ್ವಚ್ಛತೆ ಆಂದೋಲನಕ್ಕೆ ಕೈ ಜೋಡಿಸಿ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.