ಹೊಸಪೇಟೆ: ನಗರದಲ್ಲಿ ಕಳ್ಳತನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಐವರು ಕಳ್ಳರನ್ನು ಬಂಧಿಸಿರುವ ಚಿತ್ತವಾಡಗಿ ಠಾಣೆ ಪೊಲೀಸರು ಬಂಧಿತರಿಂದ 1.4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೇ 5 ರಂದು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯಲ್ಲಿ ಸಿಕ್ಕುಬಿದ್ದ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮಣಿಕಂಠ, ಕೆ.ಮಂಜುನಾಥ, ಪರಶುರಾಮ, ಓಬಳೇಶ ಮತ್ತು ರವಿ ಎಂಬುವವರನ್ನು ಬಂಧಿಸಿ 4 ತೊಲೆ ಬಂಗಾರದ ನೆಕ್ ಚೈನ್ ಅಂದಾಜು ಮೌಲ್ಯ 1.4ಲಕ್ಷ, ನಗದು ಹಣ 1490 ರೂಪಾಯಿ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ದುರ್ಗೇಶಿ ಮತ್ತು ಖಾಸೀಂ ಎಂಬುವರು ಪರಾರಿಯಾಗಿದ್ದು, ಪತ್ತೆಗೆ ಶೋಧಕಾರ್ಯ ನಡೆದಿದೆ.
ಇನ್ಸ್‌ಪೆಕ್ಟರ್ ಪ್ರಭಾಕರ್ ಎಸ್. ಧರ್ಮಟ್ಟಿ ಗ್ರಾಮೀಣ ಠಾಣೆಯ ರಘುಕುಮಾರ, ಎಎಸ್‌ಐ ವಿ.ಡಿ.ಜೋಶಿ ಸೇರಿದಂತೆ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದ ಡಿಎಸ್‌ಪಿ ಮಡಿವಾಳರ್, ಜಿಲ್ಲಾ ಎಸ್‌ಪಿ ಡಾ.ಚಂದ್ರಗುಪ್ತಾ ಸೇರಿದಂತೆ ಎ ಎಸ್‌ಪಿ ಸಿ.ಎಸ್.ಕೆ.ಬಾಬಾ ಆರೋಪಿಗಳನ್ನು ಪತ್ತೆ ಹಚ್ಚಲು ಕಾರಣೀಭೂತರಾಗಿದ್ದು ಸಿಬ್ಬಂದಿಗೆ ಸೂಕ್ತಬಹುಮಾನ ಘೋಷಿಸಿ, ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.