ADVERTISEMENT

ಮಹಮ್ಮದ್ ಗೌಸ್ ಪ್ರಥಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2013, 11:06 IST
Last Updated 25 ಜನವರಿ 2013, 11:06 IST
ಮಹಮ್ಮದ್ ಗೌಸ್ ಪ್ರಥಮ
ಮಹಮ್ಮದ್ ಗೌಸ್ ಪ್ರಥಮ   

ಬಳ್ಳಾರಿ: ಪ್ರತಿಯೊಬ್ಬ ಯುವಕರೂ ದುಶ್ಚಟಗಳಿಗೆ ದಾಸರಾಗದೆ, ದೈಹಿಕ ಆರೋಗ್ಯ ಕಾಪಾಡಿಕೊಂಡು ಉತ್ತಮ ಸಾಧನೆ ಮಾಡಬೇಕು. ದೇಶಭಕ್ತಿಯ ಕಿಚ್ಚು ಹತ್ತಿಸಿಕೊಳ್ಳಬೇಕು ಎಂದು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಸಲಹೆ ನೀಡಿದರು.

ಸ್ಥಳೀಯ ಮಲ್ಲಸಜ್ಜನ ವ್ಯಾಯಾಮ ಶಾಲೆ ವತಿಯಿಂದ ಸುಭಾಷಚಂದ್ರ ಬೋಸ್ ಜಯಂತಿ ಅಂಗವಾಗಿ ನಗರದ ಗಾಂಧೀ ಭವನದಲ್ಲಿ ಬುಧವಾರ ಸಂಜೆ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ದೈಹಿಕ ಆರೋಗ್ಯ ಹಾಗೂ ದೈಹಿಕ ಸೌಂದರ್ಯ ಕಾಪಾಡಿ ಕೊಳ್ಳುವ ಜತೆಗೆ ಉತ್ತಮ ಹವ್ಯಾಸ ಹಾಗೂ ಚಟುವಟಿಕೆ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಉತ್ತೇಜನ ದೊರೆಯುವುದಲ್ಲದೆ, ಛಲ ಹಾಗೂ ಆತ್ಮವಿಶ್ವಾಸ ರೂಢಿಸಿಕೊಳ್ಳಲು ನೆರವಾಗುತ್ತದೆ ಎಂದು ಅವರು ತಿಳಿಸಿದರು.

30ಕ್ಕೂ ಅಧಿಕ ಯುವಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವ್ಯಾಯಾಮ ಶಾಲೆಯ ಉಪಾಧ್ಯಕ್ಷ ಬಸೀರ್ ಅಹ್ಮದ್, ಆಯೋಜಕ ಎಂ.ಕೆ. ರವೀಂದ್ರ, ಕಾರ್ಯದರ್ಶಿ ಟಿ.ಜಿ. ವಿಠ್ಠಲ, ಲಕ್ಷ್ಮಿನರಸಿಂಹ, ಆಮಿರ್, ಚಿದಾನಂದ, ದಯಾನಂದ, ಸೋಮ ನಾಥ ಮತ್ತಿತರರು ಉಪಸ್ಥಿತರಿದ್ದರು.

55 ಕೆಜಿ ವಿಭಾಗದಲ್ಲಿ ಮಹಮ್ಮದ್ ಗೌಸ್ ಪ್ರಥಮ ಸ್ಥಾನ, ಶರಣು ದ್ವಿತೀಯ, ಸಂತೋಷ್ ತೃತೀಯ ಸ್ಥಾನ ಗಳಿಸಿದರು.

65 ಕೆಜಿ ವಿಭಾಗದಲ್ಲಿ ಅಬ್ದುಲ್ ರಜಾಕ್ ಪ್ರಥಮ, ಭಾಷಾ ದ್ವಿತೀಯ, ಮಹಮ್ಮದ್ ತೃತೀಯ, 66 ಕೆಜಿ ವಿಭಾಗದಲ್ಲಿ ಬಿ.ಮಯೂರ್ ಪ್ರಥಮ, ಸುರೇಶ ರೆಡ್ಡಿ ದ್ವಿತೀಯ, ಓಬೆದುಲ್ಲಾ ತೃತೀಯ ಸ್ಥಾನ ಗೆದ್ದುಕೊಂಡರು.

70 ಕೆಜಿ ವಿಭಾಗದಲ್ಲಿ ಶೇಕ್ಷಾವಲಿ ಪ್ರಥಮ, ವಲಿಭಾಷಾ ದ್ವಿತೀಯ, ಜಹೀರ್ ತೃತೀಯ, 75 ಕೆಜಿ ವಿಭಾಗದಲ್ಲಿ ಮಂಜುನಾಥ ಪ್ರಥಮ, ಮಹಮ್ಮದ್ ದ್ವಿತೀಯ ಬಹುಮಾನ ಬಡೆದರು.

75ಕ್ಕಿಂತ ಹೆಚ್ಚು ತೂಕದ ವಿಭಾಗದಲ್ಲಿ ಶಕೀಲ್ ಪ್ರಥಮ, ಗೋವಿಂದ್ ದ್ವಿತೀಯ ಸ್ಥಾನ ಗಳಿಸಿದರು. ವಲಿಭಾಷಾ ಶ್ರೇಷ್ಠ ದೇಹದಾರ್ಢ್ಯ ಪ್ರಶಸ್ತಿಗೆ, ಅಬ್ದುಲ್ ರಜಾಕ್ ದೇಹದಾರ್ಢ್ಯಶ್ರೀ ಪ್ರಶಸ್ತಿಗೆ ಭಾಜನರಾದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.