ADVERTISEMENT

ಮೊದಲ ದಿನವೇ ಮಾಸಿಕ ವೇತನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 5:50 IST
Last Updated 22 ಆಗಸ್ಟ್ 2012, 5:50 IST

ಹೊಸಪೇಟೆ: ಪ್ರತಿ ತಿಂಗಳು ಮೊದಲ ದಿನವೇ ಆರೋಗ್ಯ ಸಹಾಯಕರಿಗೂ ಮಾಸಿಕ ವೇತನವನ್ನು ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ  ಕರ್ನಾಟಕ ರಾಜ್ಯ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರ ತಾಲ್ಲೂಕು ಘಟಕದವರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಮಂಗಳವಾರ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿಯಿಂದ ಮೆರವಣಿಗೆ ಮಾಡಿದ ಆರೋಗ್ಯ ಸಹಾಯಕರು ಹಾಗೂ ಇತರರು ಹಾಜರಿದ್ದರು.
 
ಬೇಡಿಕೆಗಳು: ಸದ್ಯ ನೀಡುತ್ತಿರುವ 3 ರಿಂದ 4 ತಿಂಗಳಿಗೊಮ್ಮೆ ನೀಡುವ ವೇತನವನ್ನು ಪ್ರತಿ ತಿಂಗಳ ನೀಡಬೇಕು,  ವೈದ್ಯಾಧಿಕಾರಿಗಳಿಗೆ ನೀಡುತ್ತಿರುವ ಗ್ರಾಮೀಣ ಭತ್ಯೆ, ತುರ್ತು ಚಿಕಿತ್ಸಾ ಭತ್ಯೆ, ವಿದ್ಯಾರ್ಹತೆ ಭತ್ಯೆಯನ್ನು ಎಲ್ಲ ಸಿಬ್ಬಂದಿಗೆ ನೀಡುವಂತೆ ನೀಡಬೇಕು, ಮೂಲವೇತನಲ್ಲಿರುವ ತಾರತಮ್ಯ ನಿವಾರಿಸಬೇಕು, ಕೇಂದ್ರ ಸರ್ಕಾರದ ಅದೇಶದನ್ವಯ ಆರೋಗ್ಯ ಸಹಾಯಕರನ್ನು ಮೂರು ಸಾವಿರ ಜನಸಂಖ್ಯೆಗೆ ಒಬ್ಬರಂತೆ ನೇಮಕ ಮಾಡಬೇಕು ಎಂಬುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಸೆಪ್ಟೆಂಬರ್ 14ರೊಳಗಾಗಿ ಈಡೇರಿಸದಿದ್ದರೆ ಸಾಮೂಹಿಕವಾಗಿ ಒಂದು ದಿನದ ಸಾಂದರ್ಭಿಕ ರಜೆ ಹಾಕಿ ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ಸರ್ಕಾರಕ್ಕೆ ತಿಳಿಸಿದ್ದಾರೆ.

ಸಂಘದ ಗೌರವ ಅಧ್ಯಕ್ಷ ಎಸ್.ಎಸ್. ಶಿರಹಟ್ಟಿ, ಪ್ರಧಾನ ಕಾರ್ಯದರ್ಶಿ ಎಚ್. ಹುಲುಗಪ್ಪ ಸೇರಿದಂತೆ ಇತರೆ ಆರೋಗ್ಯ ಸಹಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.