ADVERTISEMENT

ರಸಪ್ರಶ್ನೆಯಲ್ಲಿ ಭಾಗವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 7:45 IST
Last Updated 5 ಜನವರಿ 2012, 7:45 IST

ಬಳ್ಳಾರಿ: ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಪರೀಕ್ಷಿಸಲು ಆಯೋಜಿ ಸುವ ರಸಪ್ರಶ್ನೆ (ಕ್ವಿಜ್) ಕಾರ್ಯಕ್ರಮ ಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನ ವೃದ್ಧಿಸಿ ಕೊಳ್ಳಬೇಕು ಎಂದು ಪ್ರಾಚಾರ್ಯ ಕೆ.ರಾಮಕಿರಣ್ ಸಲಹೆ ನೀಡಿದರು.

ನಗರದ ಶ್ರೀ ಗುರು ತಿಪ್ಪೇರುದ್ರ ಮಹಾವಿದ್ಯಾಲಯದಲ್ಲಿ ಮಂಗಳವಾರ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಗಳಿಗಾಗಿ ಆಯೋಜಿಸಲಾಗಿದ್ದ `ಕ್ವಿಜೋಪಿಯಾ- 2012~ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಾಗತೀಕರಣದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ಹೊಂದುವುದು ಅಗತ್ಯ. ಎಲ್ಲ ವಿಷಯ, ಕ್ಷೇತ್ರಗಳ ಕುರಿತ ಜ್ಞಾನದಿಂದ ಸಾಕಷ್ಟು ಅನುಕೂಲತೆಗಳಿವೆ. ಭಾಷೆ, ಕಲೆ, ಸಂಸ್ಕೃತಿ, ರಾಜಕೀಯ, ಸಾಹಿತ್ಯ, ಕ್ರೀಡೆ, ವಿಜ್ಞಾನ, ಪ್ರಚಲಿತ ವಿದ್ಯಮಾನ, ತಂತ್ರಜ್ಞಾನ, ಕೃಷಿ, ಪರಿಸರ ಮತ್ತಿತರ ವಿಷಯಗಳ ಕುರಿತು ಸಮಗ್ರ ಜ್ಞಾನ ಹೊಂದಿರಬೇಕು ಎಂದು ಅವರು ತಿಳಿಸಿದರು.

ಉಪನ್ಯಾಸಕರಾದ ಹನುಮಂತರೆಡ್ಡಿ, ಮಲ್ಲಿಕಾರ್ಜುನಗೌಡ, ಸಂಸ್ಥೆಯ ಅಧ್ಯಕ್ಷ ಎಸ್.ಎನ್. ರುದ್ರಪ್ಪ, ಕಾರ್ಯದರ್ಶಿ ಜಿ.ನಾಗರಾಜ್, ಯೂನಿಕ್ ಫೋರಂ ಅಧ್ಯಕ್ಷ ಎಚ್.ಆರ್. ಬಾಲನಾಗರಾಜ್, ಪ್ರಾಚಾರ್ಯ ವಿ.ಎನ್. ರಾಮರೆಡ್ಡಿ, ಉಪನ್ಯಾಸಕಿ ಆರತಿ, ರೂಪಾ, ಸುಮಾ ಮತ್ತಿತರರು ಉಪಸ್ಥಿತರಿದ್ದರು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಗರದ 9 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಳಂದ ಕಾಲೇಜಿನ ಕೆ.ವಿ. ಮಂಜುನಾಥ, ಪೂಜಾ ಪ್ರಥಮ ಬಹುಮಾನವನ್ನೂ, ವಾಸವಿ ಕಾಲೇಜಿನ ಎಸ್.ವಿಕಾಸ, ಸಿದ್ದೇಶ್ವರಿ ದ್ವಿತೀಯ ಬಹುಮಾನವನ್ನೂ ಗಳಿಸಿದರು.

ಭಗವದ್ಗೀತೆ ಪಾರಾಯಣ
ನಗರದ ಕೌಲ್‌ಬಝಾರ್‌ನ ಟೈಲರ್ ಬೀದಿಯಲ್ಲಿರುವ ಶ್ರೀ ಶನೇಶ್ವರ ಹಾಗೂ ಅಷ್ಟಲಕ್ಷ್ಮಿ ಸಮೇತ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಇದೇ 5ರಂದು ಬೆಳಿಗ್ಗೆ 11ಕ್ಕೆ ವೈಕುಂಠ ಏಕಾದಶಿ ಅಂಗವಾಗಿ ಭಗವದ್ಗೀತೆ ಪಾರಾಯಣ ನಡೆಯಲಿದೆ.

ಅರ್ಚಕ ಉದಯ ಅಗಸನೂರ ಅವರು ಗೀತೆಯ ಎಲ್ಲ 18 ಅಧ್ಯಾಯ ಗಳ ಪಾರಾಯಣ ಮಾಡಲಿದ್ದು, ಭಕ್ತರು ಪಾಲ್ಗೊಳ್ಳಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.