ADVERTISEMENT

ರೈಲ್ವೆ ಬೇಡಿಕೆ ಪರಿಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 5:05 IST
Last Updated 12 ಸೆಪ್ಟೆಂಬರ್ 2011, 5:05 IST

ಹೊಸಪೇಟೆ: ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದಲ್ಲಿ ಹೊಸಪೇಟೆ ಬಳ್ಳಾರಿ ಭಾಗದ ರೈಲ್ವೆ ಬೇಡಿಕೆಗಳನ್ನು ಪರಿಹರಿಸು ವಂತೆ ರೈಲ್ವೆ ಸಲಹಾ ಸಮಿತಿ ಸದಸ್ಯರು ವಿಭಾಗೀಯ ರೈಲ್ವೆ ವ್ಯವ ಸ್ಥಾಪಕ  ಪ್ರವೀಣಕುಮಾರ್ ಮಿಶ್ರಾಗೆ ಮನವಿ ಪತ್ರ ಸಲ್ಲಿಸಿದರು.

ಹುಬ್ಬಳಿಯಲ್ಲಿ ಶನಿವಾರ ನಡೆದ ವಿಭಾಗೀಯ ರೈಲ್ವೆ ಸಲಹಾ ಸಮಿತಿ ಸದಸ್ಯರ ಸಭೆಯಲ್ಲಿ ಹೊಸಪೇಟೆ, ಬಳ್ಳಾರಿ ಭಾಗದ ರೈಲ್ವೆ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಈ ಭಾಗದ ಬೇಡಿಕೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಆಗ್ರಹಿಸಿದರು.

ಬೇಡಿಕೆಗಳು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹೊಸಪೇಟೆ- ಕೊಟ್ಟೂರು-ಹರಿಹರ ರೈಲು ಮಾರ್ಗ ವನ್ನು ಸಂಚಾರಕ್ಕೆ ಮುಕ್ತಗೊಳಿಸ ಬೇಕು. ವಾರಕ್ಕೊಮ್ಮೆ  ಸಂಚರಿಸುವ ಮೈಸೂರು- ಶಿರಡಿ ರೈಲಿಗೆ ಪ್ರಯಾಣಿಕ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆದರೆ ಅದೇ ಗಾಡಿ ಮೂಲಕ ವಾಪಸ್ಸಾಗಲು ಪ್ರಯಾಣಿಕ ರಿಗೆ ಆಗುತ್ತಿರುವ ತೊಂದರೆ ನಿವಾರಿ ಸಲು ನಿರ್ಗಮನದ ವೇಳೆಯನ್ನು ರಾತ್ರಿ 10 ಗಂಟೆಗೆ ಅಥವಾ ಮರುದಿನ ಮುಂಜಾನೆ ನಿರ್ಗಮಿಸುವಂತೆ ವ್ಯವಸ್ಥೆ ಮಾಡಬೇಕು, ಬಳ್ಳಾರಿ, ಹೊಸಪೇಟೆ ಮಾರ್ಗವಾಗಿ ಚನ್ನೈ-ಮುಂಬೈ ನಡುವೆ ನೂತನ ರೈಲು ಆರಂಭ, ಹೈದ್ರಾಬಾದ್-ಕೊಲ್ಹಾಪುರ ವಿಶೇಷ ಗಾಡಿ 5 ದಿನಗಳವರೆಗೆ ವಿಸ್ತರಣೆ ಮಾಡುವಂತೆ ಆಗ್ರಹಿಸಲಾಯಿತು.

ವಿಶ್ವ ಪರಂಪರೆ ತಾಣ ಹಂಪಿಗೆ ಸಮೀಪದಲ್ಲಿರುವ ಹೊಸಪೇಟೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ, 2010-2011ನೇ ರೈಲ್ವೆ ಬಜೆಟ್ಟಿನಲ್ಲಿ ಪ್ರಕಟಿಸಿರುವಂತೆ ಮಾದರಿ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿ ಗೊಳಿಸುವಂತೆ ಒತ್ತಾಯಿಸಲಾಯಿತು.

ವಿಭಾಗೀಯ ರೈಲ್ವೆ ಸಲಹಾ ಸಮಿತಿಯ ಸದಸ್ಯ ಅಶೋಕ ಜೀರೆ, ಹೊಸಪೇಟೆ ರೈಲ್ವೆ ಸಮಿತಿಯ ವೈ. ಯಮುನೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.