ADVERTISEMENT

ವಚನ ಸಾಹಿತ್ಯಕ್ಕೆ ಹಳಕಟ್ಟಿ ಸೇವೆ ಅಪಾರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 5:35 IST
Last Updated 5 ಜುಲೈ 2012, 5:35 IST

ಕಂಪ್ಲಿ: ವಚನ ಸಾಹಿತ್ಯ ಸಂರಕ್ಷಿಸಿ ಪೋಷಿಸುವಲ್ಲಿ ಸಾಹಿತಿ ಫ.ಗು. ಹಳಕಟ್ಟಿಯವರ ಶ್ರಮ ಶ್ಲಾಘನೀಯ ಎಂದು ಮಲಪನಗುಡಿಯ ಬಸವ ಕೃಪಾನಿಧಿ ಆಶ್ರಮದ ಅಧ್ಯಕ್ಷ ಬಸವಕಿರಣ ಸ್ವಾಮಿ ಹೇಳಿದರು.

ಪಟ್ಟಣದ ಕಲ್ಯಾಣಿ ಚೌಕಿ ಮಠದ ಆವರಣದಲ್ಲಿ ಶರಣ ಸಾಹಿತ್ಯ ಪರಿಷತ್ತು ಮತ್ತು ಚಿಕೇನಕೊಪ್ಪ ಚನ್ನವೀರ ಶರಣರ ಸೇವಾ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ 24ನೇ ಮಹಾಮನೆ ಕಾರ್ಯಕ್ರಮದಲ್ಲಿ `ಪ್ರಸ್ತುತ ದಿನಮಾನಗಳಲ್ಲಿ ಶರಣರ ಚಿಂತನೆ~ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

ಪುರಸಭೆ ಸದಸ್ಯ ಕೆ.ಎಂ. ಹೇಮಯ್ಯ ಸ್ವಾಮಿ ಮಾತನಾಡಿ, ಚಿಕೇನಕೊಪ್ಪ ಚನ್ನವೀರ ಶರಣರ ಆಚಾರ, ನಡೆ ನುಡಿ ವಿಚಾರಗಳು ಇಂದಿಗೂ ಪ್ರಸ್ತುತ ಎಂದರು.

ಗುರು ದೊಡ್ಡ ಬಸವೇಶ್ವರ ಗುರುಕುಲ ಮಾದರಿ ಜ್ಯೋತಿಷ ಮತ್ತು ವೈದಿಕ ಪಾಠ ಶಾಲೆ ಪ್ರಾಚಾರ್ಯ ಬಸವರಾಜ ಶಾಸ್ತ್ರಿಗಳು ಅಧ್ಯಕ್ಷತೆ ವಹಿಸಿದ್ದರು. ಬೂದಗುಂಪಿ ವೀರಭದ್ರಪ್ಪ, ಹೂಗಾರ ಸಮಾಜದ ಅಧ್ಯಕ್ಷ ಜೀರು ರಮೇಶ್, ಚಿಕೇನಕೊಪ್ಪ ಚನ್ನವೀರ ಶರಣರ ಸೇವಾ ಸಮಿತಿ ಅಧ್ಯಕ್ಷ ಜೀರು ವಿರೂಪಾಕ್ಷಪ್ಪ, ಬಿ. ವೆಂಕೋಬಣ್ಣ, ಎಸ್.ಎಂ. ಮಹಾಬಲೇಶ್ವರ ಸ್ವಾಮಿ, ಮಾಟೂರು ಮಲ್ಲಪ್ಪ, ಬೂದಗುಂಪಿ ಹುಸೇನ್ ಸಾಬ್ ಹಾಜರಿದ್ದರು.

ಅಧ್ಯಾತ್ಮ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿನ ಸೇವೆ ಗುರುತಿಸಿ ಗುರು ಶಿವ ಶರಣರ ಅನುಭವ ಆಶ್ರಮದ ಅಧ್ಯಕ್ಷ ಬಿಂಗಿ ವೆಂಕೋಬಣ್ಣ ಅವರನ್ನು ಸನ್ಮಾನಿಸಲಾಯಿತು. ಗುರುಪೂರ್ಣಿಮೆ ನಿಮಿತ್ತ ಪಾಮಯ್ಯ ಶರಣರು ಬಸವೇಶ್ವರ ವಚನ ಪುಸ್ತಕಗಳನ್ನು ವಿತರಿಸಿದರು. ಮಡಿವಾಳರ ಹುಲುಗಪ್ಪ ಪ್ರಾರ್ಥಿಸಿ ದರು. ಬಂಗಿ ದೊಡ್ಡ ಮಂಜುನಾಥ್ ಸ್ವಾಗತಿಸಿ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.