ADVERTISEMENT

ವಾಮಾಚಾರ ಏನೂ ಮಾಡುವುದಿಲ್ಲ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 6:40 IST
Last Updated 3 ಫೆಬ್ರುವರಿ 2011, 6:40 IST

ಬಳ್ಳಾರಿ: ಸತ್ಯದ ಮಾರ್ಗದಲ್ಲಿ ನಡೆಯುವವರನ್ನು ವಾಮಾಚಾರ ಏನನ್ನೂ ಮಾಡುವುದಿಲ್ಲ. ಮುಖ್ಯಮಂತ್ರಿ ಬಿ.ಎಎಸ್. ಯಡಿಯೂರಪ್ಪ ಅವರು ಮಾಟ-ಮಂತ್ರಕ್ಕೆ ಭಯಭೀತರಾಗುವ ಅಗತ್ಯವಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿಶಂಕರ ಗುರೂಜಿ ಹೇಳಿದರು.ನಗರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಆನಂದೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

ವಾಮಾಚಾರದ ಬಗ್ಗೆ ಇರುವ ಅಂಧ ವಿಶ್ವಾಸವನ್ನು ಕೈಬಿಟ್ಟು, ಸನಾತನ, ವೈದಿಕ ಪರಂಪರೆಯ ಮಾರ್ಗದಲ್ಲಿ ನಡೆಯಬೇಕು. ವಾಮಾಚಾರ ಎಂಬ ಅನಿಷ್ಟ ಪದ್ಧತಿಯನ್ನು ಯಾರೋ ಹುಟ್ಟುಹಾಕಿದ್ದಾರೆ. ಆದರೆ. ಮಾಟ- ಮಂತ್ರಗಳಿಗೆ ಬಲವಿಲ್ಲ. ದೈವಭಕ್ತಿ, ಆತ್ಮಶಕ್ತಿ ಇದ್ದಲ್ಲಿ ವಾಮಾಚಾರ ಹತ್ತಿರಕ್ಕೂ ಸುಳಿಯು ವುದಿಲ್ಲ ಎಂದು ಅವರು ತಿಳಿಸಿದರು.

ಭ್ರಷ್ಟಾಚಾರ ಪ್ರತಿ ಕ್ಷೇತ್ರದಲ್ಲೂ ಹಾಸುಹೊಕ್ಕಾಗಿದೆ.ಜನ ಇದರಿಂದ ರೋಸಿಹೋಗಿದ್ದು,ಇದರ ನಿರ್ಮೂಲನೆಗಾಗಿ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದೆ.ಆರ್ಟ್ ಆಫ್ ಲಿವಿಂಗ್ ಸಂಸ್ಥೆಯೂ ಭ್ರಷ್ಟಾಚಾರದ ವಿರುದ್ಧ ಹೋರಾಡಲು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.ನೈಸರ್ಗಿಕ ಸಂಪತ್ತನ್ನು ದೇಶೀಯವಾಗಿ ಬಳಸಿಕೊಳ್ಳಬೇಕು.ಜಿಲ್ಲೆಯಲ್ಲಿ ದೊರೆಯುತ್ತಿರುವ ಕಬ್ಬಿಣದ ಅದಿರನ್ನು ಹೊರ ದೇಶಗಳಿಗೆ ರಫ್ತು ಮಾಡದೆ, ಸ್ಥಳೀಯವಾಗಿ ಸದುಪಯೋಗ ಆಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ತಾಂತ್ರಿಕತೆಯನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.

ಯಂತ್ರೋಪಕರಣ ಬಳಕೆಗಾಗಿ ಆಹ್ವಾನ
ಬಳ್ಳಾರಿ: ಬಳ್ಳಾರಿಯ ಸಿದ್ಧ ಉಡುಪು ಸಂಶೋಧನೆ ತರಬೇತಿ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರ ಹೊಂದಿರುವ ಸಿದ್ಧ ಉಡುಪು ಕ್ಷೇತ್ರದ ಯಂತ್ರೋಪಕರಣ ಗಳನ್ನು ಆಸಕ್ತ ಕೈಗಾರಿಕೆಗಳು ಬಳಸಿ ಕೊಳ್ಳಬೇಕು ಎಂದು ಪ್ರಾಚಾರ್ಯ ರವೀಂದ್ರ ಬಂಡಿವಾಡ್ ಮನವಿ ಮಾಡಿದ್ದಾರೆ. ಆಸಕ್ತ ಕೈಗಾರಿಕೆಗಳು ಇವುಗಳ ಉಪಯೋಗ ಪಡೆಯಲು ಕೇಂದ್ರವನ್ನು ಸಂಪರ್ಕಿಸಬೇಕು. ಮಾಹಿತಿಗಾಗಿ ದೂರವಾಣಿ ಸಂಖ್ಯೆ (08392) 210213 ಸಂಪರ್ಕಿಸ ಬಹುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.