ADVERTISEMENT

ಶಿಕ್ಷಕ ಸಮುದಾಯದ ಕೊಡುಗೆ ಅನನ್ಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 3:05 IST
Last Updated 19 ಮಾರ್ಚ್ 2012, 3:05 IST

ಬಳ್ಳಾರಿ: ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಶಿಕ್ಷಕ ಸಮುದಾಯ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅನನ್ಯ ಎಂದು ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ದಮ್ಮೂರು ಸೋಮಪ್ಪ ತಿಳಿಸಿದರು.
ತಾಲ್ಲೂಕಿನ ಸೋಮಲಾಪುರ ಕ್ರಾಸ್‌ನಲ್ಲಿರುವ ಶ್ರೀಗುರು ಸಿದ್ಧೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜನನಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ವಾರ್ಷಿ ಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಬಂಧ ಅತ್ಯಂತ ಮಧುರವಾದದ್ದು, ಶಿಕ್ಷಕರನ್ನು ದೈವಕ್ಕೆ ಹೋಲಿಸಲಾಗು ತ್ತಿದೆ. ವಿದ್ಯಾರ್ಥಿಗಳು ಗುರುವಿನಲ್ಲಿ ದೇವರನ್ನು ಕಂಡರೆ, ಶಿಕ್ಷಕರು ವಿದ್ಯಾರ್ಥಿಗಳನ್ನೇ ದೇವರೆಂದು ಭಾವಿಸಿ, ಅವರ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುತ್ತಾರೆ ಎಂದು ಅವರು ಹೇಳಿದರು.

ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಬ್ರಹ್ಮಕುಮಾರಿ ಭಾರತೀಜಿ ಮಾತನಾಡಿ, ಮಕ್ಕಳಲ್ಲಿ ಸನ್ನಡತೆ ಬೆಳೆಸುವ  ಹಾಗೂ ದೇಶಭಕ್ತಿ, ನಾಡಭಕ್ತಿ ಮೂಡಿಸುವ ಕೆಲಸವಾಗ ಬೇಕು ಎಂದರು.

ಕುರುಗೋಡು ಠಾಣೆ ಪಿಎಸ್‌ಐ ಎಂ.ಜಿ. ನಾಗರಾಜ್ ಮಾತನಾಡಿ, ಗುರುಗಳ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಗುರಿ ಸಾಧನೆಯತ್ತ ಮುನ್ನಗ್ಗಬೇಕು ಎಂದು ಸಲಹೆ ನೀಡಿದರು.

ಕ್ಲಸ್ಟರ್ ಸಂಯೋಜಕ ಜೆ.ಬಸವರಾಜ ರೆಡ್ಡಿ ಮಾತನಾಡಿದರು. ಜಿ.ಪಂ.ಸದಸ್ಯ ಎರಿಸ್ವಾಮಿ, ತಾ.ಪಂ. ಸದಸ್ಯೆ ಜಡೆಮ್ಮ, ಎರ‌್ರೆಪ್ಪಗೌಡ, ಗ್ರಾ.ಪಂ. ಅಧ್ಯಕ್ಷ ಕೆ.ಮಲ್ಲೇಶಪ್ಪ, ವಿ.ಗೋಪಾಲಪ್ಪ, ಯು.ಸಣ್ಣಮಲ್ಲಪ್ಪ, ಎರ‌್ರಿಗೌಡ ಮತ್ತಿತರರು ಉಪಸ್ಥಿತರಿದ್ದರು.

ಉಪನ್ಯಾಸಕ ಮಹಾಲಿಂಗನಗೌಡ ಸ್ವಾಗತಿಸಿದರು. ಎಂ.ಕೆ. ಮೈಲಾರಪ್ಪ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.