ADVERTISEMENT

ಸಮರ್ಪಕ ಕುಡಿಯುವ ನೀರು ಪೂರೈಸಲು ಆದೇಶ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 7:40 IST
Last Updated 13 ಜುಲೈ 2012, 7:40 IST

ಬಳ್ಳಾರಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ  ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ  ಅರುಣಾ ತಿಪ್ಪಾರೆಡ್ಡಿ ಸೂಚಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಳೆಯ ಅಭಾವ ಇರುವುದರಿಂದ ಜನತೆ ಹಾಗೂ ಜಾನುವಾರುಗಳಿಗೆ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡಬೇಕು. ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು. ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಆದ್ಯತೆಯ ಮೇರೆಗೆ ವಿದ್ಯುದೀಕರಣ ಕಾರ್ಯವನ್ನು  ಕೈಗೊಳ್ಳಬೇಕು. ಎಲ್ಲಾ ಇಲಾಖೆಗಳು ನಿಗಧಿತ ಅವಧಿಯೊಳಗೆ ಯೋಜನಾ ಕಾಮಗಾರಿಗಳನ್ನು ಉತ್ತಮ ಗುಣ ಮಟ್ಟದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಚೆನ್ನಬಸವನಗೌಡ, ಸಂಡೂರು ತಾಲ್ಲೂಕಿನ ತಾರಾನಗರ ಹಾಗೂ ಇತರ 7 ಗ್ರಾಮಗಳಿಗೆ ಶಾಶ್ವತ  ಹಾಗೂ ಸುರಕ್ಷಿತ ಕುಡಿಯುವ ನೀರು ಸರಬರಾಜಿನ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿ ನೀಡಬೇಕು. ಕಳೆದ ನಾಲ್ಕು ವರ್ಷಗಳಿಂದ ಕಾಮಗಾರಿಗೆ ನೆನೆಗುದಿಗೆ ಬಿದ್ದಿದೆ. ಶೀಘ್ರವಾಗಿ ಕಾಮಗಾರಿಯನ್ನು ಕೈಗೊಳ್ಳಬೇಕು. ವಸತಿ ಯೋಜನೆಗಳಡಿ ನಿರ್ಮಿಸಿದ ಮನೆಗಳನ್ನು ಕೂಡಲೇ ಹಸ್ತಾಂತರಿಸ ಬೇಕು ಎಂದು ಅವರು ಸೂಚಿಸಿದರು.   

ಮುಖ್ಯ ಕಾರ‌್ಯನಿರ್ವಹಣಾಧಿಕಾರಿ ಮಂಜುನಾಥ ನಾಯಕ್ ಅವರು, 2006 ರಿಂದ 2009 ರ ಅವಧಿಯಲ್ಲಿ ಕೈಗೊಂಡ ಕೆರೆಗಳ ನಿರ್ಮಾಣ ಕಾಮಗಾರಿಯಲ್ಲಿ ತಪ್ಪೆಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಿ ಸಿದ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು  ಶಿಫಾರಸ್ಸು ಮಾಡಬೇಕು. ಕೆರೆಗಳಿಂದ ಸರಬರಾಜು ಯೋಜನೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸಬೇಕು.
 
ಪರಿಶಿಷ್ಟರ ಕಲ್ಯಾಣ ಕ್ಕಾಗಿ ಎಟಿಪಿ ಯೋಜನೆಯಡಿ ಕೈಗೊಳ್ಳ ಲಾದ ಯೋಜನೆಗಳನ್ನು ಪರಿಶೀಲಿಸ ಬೇಕು. ಗ್ರಾಮ ಪಂಚಾಯತ್‌ಗಳಿಂದ  ಸಂಗ್ರಹಿಸಿದ ಕರ ವಸೂಲಿಯಲ್ಲಿ ಮಜೂರಿಯಡಿ ಕಾರ‌್ಯನಿರ್ವಹಿಸುವ  ಸಿಬ್ಬಂದಿ ವರ್ಗದವರಿಗೆ ಕ್ರಮಬದ್ಧವಾಗಿ ವೇತನವನ್ನು ನೀಡಬೇಕು. ಗ್ರಾಮ ಪಂಚಾಯಿತಿಗಳು ನಿರ್ವಹಿಸುವ ಕಿರು ನೀರು ಸರಬರಾಜು ಯೋಜನೆಗಳಡಿ ಕೊಳವೆಬಾವಿಗಳ ಮೋಟರ್ ಪಂಪ್ ಸೆಟ್‌ಗಳ ದುರಸ್ತಿ ನಿರ್ವಹಣೆಯನ್ನು ಟೆಂಡರ್ ಮೂಲಕ ಕೈಗೊಳ್ಳಬೇಕು.
 
ಆನ್ ಲೈನ್ ಮೂಲಕ ನೋಂದಣಿ ಮಾಡಿ ವಿತರಿಸಲಿರುವ ಪಡಿತರ ಚೀಟಿ ವಿತರಣೆ ಕಾರ‌್ಯವನ್ನು ಚುರುಕುಗೊಳಿಸ ಬೇಕು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕರು ಜವಾಬ್ದಾರಿ ವಹಿಸಿಕೊಂಡು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸ ಬೇಕು. 54 ಸಾವಿರ ಅರ್ಜಿಗಳು ನೋಂದಣಿಯಾಗಿವೆ.  ವಸತಿ ಯೋಜನೆ ಯಡಿ ಮನೆಗಳನ್ನು ಶೀಘ್ರವಾಗಿ ನಿರ್ಮಿಸ ಬೇಕು.

ಮನೆಗಳ ನಿರ್ಮಾಣ ಕ್ಕಾಗಿ ನಿವೇಶನವನ್ನು ತುರ್ತಾಗಿ ಪಡೆಯ ಬೇಕು. ಇನ್ನೂ ವಿಳಂಬ ಮಾಡಿದರೆ ಸಮಸ್ಯೆಗಳು ಉಲ್ಬಣವಾಗಲಿವೆ.  ವಸತಿ ಯೋಜನೆಗೆ ಸಾಕಷ್ಟು ಅನುದಾನವಿದ್ದು, ನಿವೇಶನ ವನ್ನು ಪಡೆದರೆ ಹೆಚ್ಚಿನ ಫಲಾನುಭಗಳಿಗೆ ನೀಡಬಹುದು. ವಸತಿ ಯೋಜನೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು.
 
ಇಲ್ಲದಿದ್ದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.  ಗಂಗಾ ಕಲ್ಯಾಣ ಯೋಜನೆಯಡಿ  ಬಾಕಿ ಇರುವ ಕೊಳವೆ ಬಾವಿಗಳನ್ನು ಶೀಘ್ರವಾಗಿ ಕೊರೆಸಬೇಕು.  ಈಗಾಗಲೇ ಕೊರೆದ 1437 ಕೊಳವೆ ಬಾವಿಗಳಿಗೆ ತುರ್ತಾಗಿ ವಿದ್ಯುದೀಕರಣ ಮಾಡಬೇಕು.  ವಿಶೇಷ ಘಟಕ ಯೋಜನೆಯಡಿ ಅರ್ಹ ಫಲಾನು ಭವಿಗಳಿಗೆ ಯೋಜನೆಗಳು ಲಭ್ಯವಾಗು ವಂತೆ ಕ್ರಮ ಕೈಗೊಳ್ಳಬೇಕು. ಕುಡಿ ಯುವ ನೀರು ಸರಬರಾಜು ಯೋಜನೆ ಗಳಿಗೆ ಆದ್ಯತೆ ಮೇರೆಗೆ ವಿದ್ಯುದೀಕರಣ ಮಾಡಬೇಕು ಎಂದು ಸೂಚಿಸಿದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 45 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.   ಈಗಾಗಲೇ 16 ಕೋಟಿ ರೂ. ಅನುದಾನ ಬಿಡುಗಡೆ ಮಾಡ ಲಾಗಿದೆ.  ಇನ್ನೂ ಎರಡು ಕಂತುಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ. 

ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಯೋಜನಾಬದ್ಧವಾಗಿ ಅನುಷ್ಠಾನ ಗೊಳಿಸಬೇಕು. ಹೆಚ್ಚು ಕಾಮಗಾರಿ ಗಳನ್ನು ಕೈಗೊಂಡು ಅನುದಾನವನ್ನು ವೆಚ್ಚ ಮಾಡಿದ ಗ್ರಾಮ ಪಂಚಾಯತಿ ಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗು ವುದು.  ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಯೋಜನೆಯಡಿ 6.48 ಕೋಟಿ ರೂ. ಅನುದಾನವನ್ನು ನಿಗದಿ ಪಡಿಸಲಾಗಿದೆ.  ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲು ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು ಎಂದು ಆದೇಶಿಸಿದರು. 

ಜಿಲ್ಲೆಯಲ್ಲಿ 357224 ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ.  3457 ಮಕ್ಕಳು ಶಾಲೆಯನ್ನು ಬಿಟ್ಟಿದ್ದಾರೆ.  ಈ ಮಕ್ಕಳನ್ನು ಮುಖ್ಯವಾಹಿನಿಗೆ ತಂದು ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು.  ವಿದ್ಯಾರ್ಥಿನಿಲಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥ ಗಳನ್ನು ನೀಡಬೇಕು. ಗ್ರಾಮೀಣ ಪ್ರದೇಶ ದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು.  ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನ ದಲ್ಲಿದ್ದು, ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗೋನಾಳ್ ರಾಜಶೇಖರ ಗೌಡ ಉತ್ತಮವಾಗಿ ಕುಡಿಯುವ ನೀರಿನ ಕೆರೆಗಳ ನಿರ್ವಹಣೆ ಮಾಡಬೇಕು.  ಗ್ರಾಮ ಪಂಚಾಯತಿ ಗಳಲ್ಲಿ ಗೌರವಧನ ದಡಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ವರ್ಗದವರಿಗೆ ವೇತನ ಕಾಲಕಾಲಕ್ಕೆ ನೀಡಬೇಕೆಂದರು. ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು,  ಜಿ.ಪಂ. ಉಪಕಾರ್ಯದರ್ಶಿ ಮಹೇಶ್ವರಯ್ಯ, ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.