ADVERTISEMENT

ಸಹೋದರಿಯರಿಬ್ಬರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 6:05 IST
Last Updated 17 ಜೂನ್ 2013, 6:05 IST

ಸಂಡೂರು (ಬಳ್ಳಾರಿ ಜಿಲ್ಲೆ): ತಮ್ಮ ಹಾಗೂ ಗ್ರಾಮದ ಮತ್ತೊಂದು ಕುಟುಂಬದ ನಡುವೆ ಜಗಳ ನಡೆದ ಸಂದರ್ಭದಲ್ಲಿ ಕೇಳಿಬಂದ ನಿಂದನೆಯ ಮಾತುಗಳಿಂದ ಮನನೊಂದ ಸಹೋದರಿಯರಿಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ತಾರಾನಗರ ಗ್ರಾಮದಲ್ಲಿ ಶನಿವಾರ ರಾತ್ರಿ  ನಡೆದಿದೆ.

ಮೃತರನ್ನು ಭಾಗ್ಯಮ್ಮ (27) ಹಾಗೂ ಕವಿತಾ (16) ಎಂದು ಗುರುತಿಸಲಾಗಿದೆ. ತಮ್ಮ ತಾಯಿ ಗಾಳೆಮ್ಮ ಮತ್ತು ಗ್ರಾಮದ ಮತ್ತೊಂದು ಕುಟುಂಬದ ಗಾಳೆಮ್ಮ ಎಂಬುವವರ ಮಧ್ಯೆ ಶನಿವಾರ ನಡೆದ ಜಗಳದ ಸಂದರ್ಭದಲ್ಲಿ ಪರಸ್ಪರ ಬೈದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕೇಳಿಬಂದ ನಿಂದನೆಯ ಮಾತುಗಳಿಂದ ಸಹೋದರಿಯರು ಮನನೊಂದು ನೇಣಿಗೆ ಶರಣಾಗಿದ್ದಾರೆ. ಡಿವೈಎಸ್ಪಿ ಪಿ.ಡಿ.ಗಜಕೋಶ ಹಾಗೂ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.