ADVERTISEMENT

ಸಿಡಿಲು ಬಡಿದು ಕಾರ್ಮಿಕನ ಸಾವು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 7:45 IST
Last Updated 4 ಏಪ್ರಿಲ್ 2012, 7:45 IST

ಕೊಟ್ಟೂರು: ಇಲ್ಲಿಗೆ ಸಮೀಪದ ಹ್ಯಾಳ್ಯಾ ಗ್ರಾಮದ ಹತ್ತಿರ ಶೇಂಗಾ ಸುಲಿಯುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದುರಗಪ್ಪ(26) ಎಂಬಾತನಿಗೆ ಮಂಗಳವಾರ ಸಿಡಿಲು ಹೊಡೆದು ಸ್ಥಳದಲ್ಲಿಯೇ ಮರಣ ಹೊಂದಿದ್ದಾನೆ.

ಈತನ ಸಂಬಂಧಿ ಸುಮಾ ಎಂಬ ಯುವತಿಗೆ ಸಿಡಿಲು ಬಡಿದು, ಸಿಡಿಲಿನ ರಭಸಕ್ಕೆ ಕೆಳಕ್ಕೆ ಬಿದ್ದಿದ್ದರಿಂದ ತಲೆಗೆ ತೀವ್ರ ಪೆಟ್ಟಾಗಿದ್ದು, ಆರು ಹೊಲಿಗೆ ಹಾಕಲಾಗಿದೆ. ಸುಮಾ ಅಪಾಯದಿಂದ ಪಾರಾಗಿದ್ದು, ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರುಣ ಕುಮಾರ್ ತಿಳಿಸಿದರು.

ಇದೇ ತಿಂಗಳು ತಾ.29ರಂದು ದುರಗಪ್ಪನ ಮದುವೆ ಇತ್ತು ಎಂದು ಆತನ ಕುಟುಂಬದವರು ತಿಳಿಸಿದ್ದಾರೆ. ಇಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಮಳೆ ಮಾತ್ರ ಬಂದಿಲ್ಲ.

ಸ್ಥಳಕ್ಕೆ ತಹಶೀಲ್ದಾರ್ ವೀರಮಲ್ಲಪ್ಪ ಪೂಜಾರ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಮುಖಂಡ ಎಂ.ಎಂ. ಜೆ. ಹರ್ಷವರ್ದನ್, ತಾಲೂಕು ಪಂಚಾಯ್ತಿ ಸದಸ್ಯ ಎ.ಎಂ. ಗುರುಪ್ರಸಾದ್, ಹೊಸಹಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯ ಶಶಿಧರ ಆಸ್ಪತ್ರೆಗೆ ಭೇಟಿ ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.