ADVERTISEMENT

`ಹಲವು ಸಮಸ್ಯೆಗಳಿಗೆ ಯೋಗದಿಂದ ಸಮಾಧಾನ'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 6:39 IST
Last Updated 20 ಡಿಸೆಂಬರ್ 2012, 6:39 IST

ಸಂಡೂರು: ಪತಂಜಲಿ ಯೋಗ ಸಮಿತಿ ಯವರು ಉಚಿತವಾಗಿ ಕಲಿಸಿಕೊಡುವ ಯೋಗ ಶಿಬಿರದಲ್ಲಿ ಭಾಗವಹಿಸಿ ಒಳ್ಳೆಯ ಆರೋಗ್ಯ, ಉತ್ತಮ ಸಂಸ್ಕಾರ ಪಡೆದು ಕೊಂಡು ಬದುಕನ್ನು ಸುಂದರ ವಾಗಿಸಿಕೊಳ್ಳುವಂತೆ ಯೋಗ ಶಿಕ್ಷಕ ಬವರ್‌ಲಾಲ್ ಆರ್ಯ ತಿಳಿಸಿದರು.

ಅವರು ಸೋಮವಾರ ಪಟ್ಟಣ ವಿ.ಎಸ್.ಎಲ್.ಮೈದಾನದಲ್ಲಿ ನಡೆದ ಯೋಗ ಶಿಬಿರದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಮಸ್ಯೆ ಗಳು ಅನೇಕ ಸಮಾಧಾನ ಒಂದೇ, ಅದು ಯೋಗದಿಂದ ಎಂದು  ಎಂದು ಯೋಗದ ಮಹತ್ವವನ್ನು ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿ ಕೊಟ್ಟರು.

ಸಮಾಜ ಸೇವಕಿ ರೂಪಲಾಡ್ ಮಾತನಾಡಿ , ಹಿಂದಿನ ಕಾಲದಲ್ಲಿ ಋಷಿ ಮುನಿಗಳು,  ಸಾಧು ಸಂತರು ಮಾತ್ರ ಯೋಗ ಮಾಡುತ್ತಿದ್ದರು. ಇಂದು ಸಾಮಾನ್ಯ ಜನರು ಕೂಡ ಅದರ ಅಗತ್ಯತೆ ಅರಿತು ಯೋಗ ಕಲಿಯುತ್ತಿದ್ದಾರೆ. ಆರೋಗ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಪತಂಜಲಿ ಯೋಗ ಸಮಿತಿಯವರ ಕಾರ್ಯ ಶ್ಲಾಘನೀಯ ಎಂದರು. 

ಪುರಸಭೆ ಉಪಾಧ್ಯಕ್ಷೆ ಆಶಾಲತಾ , ದಾಕ್ಷಾ ಯಿಣಿ, ಅನ್ನಪೂರ್ಣ ತುಕಾರಾಂ, ಜಿ.ವೀರೇಶ್, ಶಿವಲೀಲಾ, ಅಪ್ಪೇನಹಳ್ಳಿ ಕುಮಾರಸ್ವಾಮಿ, ವಿನಾಯಕ ಸ್ವಾಮಿ, ಶ್ರೀನಿವಾಸ, ಹೊಸಪೇಟೆ ಕಿರಣ್, ಬಳ್ಳಾರಿಯ ನಟರಾಜ್, ಷಣ್ಮುಖಪ್ಪ ಬಂಡೆಮೇಗಳ ಆಶಾ, ಪದ್ಮಾವತಿ, ಬಿ.ಜೆ. ನೀಲಮ್ಮ, ಸಹನಾ, ಎಸ್.ಪಿ.ಎಸ್. ರೇಣುಕಾ, ಟಿ.ಎಂ.ಶಿವಕುಮಾರ್, ವಿ.ಎಂ.ನಾಗಭೂಷಣ್, ವಿರೇಂದ್ರಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT