ADVERTISEMENT

ಹಳೇಕೋಟೆ: ಜನಸ್ಪಂದನ ಸಭೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 5:35 IST
Last Updated 6 ಜೂನ್ 2011, 5:35 IST

ಸಿರುಗುಪ್ಪ: ಜನಸ್ಪಂದನ ಸಭೆಗೆ ವ್ಯಕ್ತಿ ಯೊಬ್ಬ ಕಂಠಪೂರ್ತಿ ಕುಡಿದು ತೇಲಾ ಡುತ್ತಾ ಬಂದು ಆಶ್ರಯ ಮನೆ ಕೊಡಿ ಎಂದು ಸಭೆಯಲ್ಲಿ ಕಿರಿಕಿರಿ ಮಾಡಿದ ಪ್ರಸಂಗ ತಾಲ್ಲೂಕಿನ ಹಳೇಕೋಟೆ ಗ್ರಾಮ ದಲ್ಲಿ ಶನಿವಾರ ಜರುಗಿತು.

ಶಾಸಕ ಎಂ.ಸೋಮಲಿಂಗಪ್ಪ, ಅಧಿಕಾರಿ ಗಳು, ಗ್ರಾಮಸ್ಥರ ಸಮ್ಮುಖದಲ್ಲಿಯೇ ನಡೆದ ಸಭೆಯಲ್ಲಿ ಗ್ರಾಮಸ್ಥ ತನಗೆ ಮನೆಯಿಲ್ಲ ಆಶ್ರಯ ಮನೆ ಕೊಡಿ ಎಂದು ಸಭೆಯ ಗಮನ ಸೆಳೆದನು. ಆದರೆ ಆತ ಕಂಠ ಪೂರ್ತಿ ಕುಡಿದು ಅಮಲಿನಲ್ಲಿದ್ದ ಕಾರಣ ಪೋಲಿಸರು ಆತನನ್ನು ಅಲ್ಲಿಂದ ಮನವೊಲಿಸಿ ಆಚೆ ಕಳಿಸಿದರು.

ಸಭೆಯನ್ನು ಉದ್ಘಾಟಿಸಿದ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, ಸುವರ್ಣಭೂಮಿ ಯೋಜನೆಯಡಿ     ರೈತ ರಿಗೆ ಉಚಿತವಾಗಿ ಮೊದಲನೇ ಕಂತಿನಲ್ಲಿ ಐದು ಸಾವಿರ ರೂಪಾಯಿ ಬಿತ್ತನೆಯ ನಂತರ ಐದು ಸಾವಿರ ರೂಪಾಯಿ ಆರ್ಥಿಕ ಸೌಲಭ್ಯ ನೀಡುವುದಾಗಿ ತಿಳಿಸಿದರು.

ಜಿ.ಪಂ. ಸದಸ್ಯ ಡಿ.ಸೋಮಪ್ಪ, ತಾ.ಪಂ. ಸದಸ್ಯೆ ಗೌರಮ್ಮ, ಗ್ರಾ.ಪಂ.ಅಧ್ಯಕ್ಷೆ ಮುಬಾರಕ್, ಉಪಾಧ್ಯಕ್ಷೆ ಬಿ.ವಿ. ರಾಮು ಲಮ್ಮ, ತಾ.ಪಂ.ಇ.ಓ ತಿಪ್ಪೇರುದ್ರಪ್ಪ ಅತಿಥಿಗಳಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.