ADVERTISEMENT

‘ವಾಲ್ಮೀಕಿ ಯಾರು’ ಕೃತಿ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 9:11 IST
Last Updated 19 ಮಾರ್ಚ್ 2014, 9:11 IST

ಕಂಪ್ಲಿ: ಡಾ.ಕೆ.ಎಸ್‌ ನಾರಾಯಣಾ ಚಾರ್ಯ ಬರೆದಿರುವ ‘ವಾಲ್ಮೀಕಿ ಯಾರು? ಒಂದು ಜಿಜ್ಞಾಸೆ’ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳು ವಂತೆ ಆಗ್ರಹಿಸಿ ಫಿರ್ಕಾ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮತ್ತು ನಗರ ಘಟಕ ಪದಾಧಿಕಾರಿಗಳು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಮಹರ್ಷಿ ವಾಲ್ಮೀಕಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವ ಣಿಗೆ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ ದಲ್ಲಿ ಸಮಾವೇಶಗೊಂಡಿತು.
ಮಹಾಸಭಾ ಅಧ್ಯಕ್ಷ ಬಿ. ನಾರಾ ಯಣಪ್ಪ ಮಾತನಾಡಿ, ಪ್ರಸ್ತುತ ಕೃತಿಯಲ್ಲಿ ವಾಲ್ಮೀಕಿ ಸಮುದಾಯದ ವರ ಭಾವನೆಗೆ ಧಕ್ಕೆ ಬರುವಂತ ವಿಚಾರಗಳಿದ್ದು, ಸರ್ಕಾರ ಶೀಘ್ರ ಪರಿಶೀಲಿಸಿ ಮುಟ್ಟುಗೋಲು ಹಾಕಿಕೊ ಳ್ಳುವುದರೊಂದಿಗೆ ಕೃತಿ ರಚನಾಕಾರ ರನ್ನು ಗಡಿಪಾರು ಮಾಡುವಂತೆ ಆಗ್ರಹಿ ಸಿದರು.

ನ್ಯಾಯಕ್ಕಾಗಿ ಘೋಷಣೆ ಕೂಗಿದ ಸಮುದಾಯದ ಮುಖಂಡರು ನಂತರ ಡಾ.ಕೆ.ಎಸ್. ನಾರಾಯಣಾಚಾರ್ಯರ ಪ್ರತಿಕೃತಿ ದಹಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಫಿರ್ಕಾ ಉಪಾ ಧ್ಯಕ್ಷ ಸುಗ್ಗೇನಹಳ್ಳಿ ಬಿ. ಕರಿಯಪ್ಪ ನಾಯಕ, ಕಾರ್ಯದರ್ಶಿ ನೀರಗಂಟಿ ವೀರೇಶ್, ಖಜಾಂಚಿ ಎ. ಹುಲುಗಪ್ಪ, ನಗರ ಘಟಕ ಅಧ್ಯಕ್ಷ ಬೂದಗುಂಪಿ ಅಂಬಣ್ಣ, ಕಾರ್ಯದರ್ಶಿ ಎನ್. ಶಿವಪ್ಪ ನಾಯಕ, ಮುಖಂಡರಾದ ಡಾ. ವೆಂಕಟೇಶ್ ಸಿ.ಭರಮಕ್ಕನವರ್, ದೇವ ರಮನಿ ಯಲ್ಲಪ್ಪ, ಬಿ. ಬಸವರಾಜ, ಗ್ರಾಮ ಲೆಕ್ಕಾಧಿಕಾರಿ ಗೋಪಾಲ್, ಜಿ. ಹೊನ್ನೂರುಸ್ವಾಮಿ, ನಾಯಕರ ಹನು ಮಂತಪ್ಪ, ಹೊನ್ನಳ್ಳಿ ದ್ಯಾವಣ್ಣ, ಅಳ್ಳಳ್ಳಿ ಲೋಕೇಶ್,ಮಾವಿನಹಳ್ಳಿ ಹನುಮಂ ತಪ್ಪ, ಕಣಿವಿ ತಿಮ್ಮಾಲಾಪುರ ಶಿವ ಲಿಂಗಪ್ಪ, ಬಸವರಾಜ, ರುದ್ರಪ್ಪ, ಹುಲು ಗಪ್ಪ ಸೇರಿ ಸುತ್ತಲ ಗ್ರಾಮಗಳ ವಾಲ್ಮೀಕಿ ಸಮುದಾಯದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮನವಿ ಸಲ್ಲಿಕೆ
ಕೂಡ್ಲಿಗಿ:
ಮಹರ್ಷಿ ವಾಲ್ಮೀಕಿ ಬೇಡ ಸಮುದಾಯದವರಲ್ಲ ಬ್ರಾಹ್ಮಣ ಸಮು ದಾಯದವರು ಎಂದು ಉಲ್ಲೇಖಿಸಿ ಕೆ.ಎಸ್. ನಾರಾಯಣಾಚಾರ್ಯ ರಚಿಸಿರುವ ‘ವಾಲ್ಮೀಕಿ ಯಾರು’ ಎನ್ನುವ ಕೃತಿಯನ್ನು ತಕ್ಷಣವೇ ನಿಷೇಧಿಸಬೇಕು’ ಎಂದು ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಘಟಕ ಈಚೆಗೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ನಂತರ  ತಹಶೀಲ್ದಾರ್ ಮುಖಾಂ ತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ  ದರು. ಕೃತಿಯಲ್ಲಿ ಹೇಳುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕದಡುವ ಪ್ರಯತ್ನವನ್ನು ಲೇಖಕರು ಮಾಡುತ್ತಿ ದ್ದಾರೆ ಎಂದು ಮನವಿಯಲ್ಲಿ  ತಿಳಿಸ ಲಾಗಿದೆ. ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಈ ಕೃತಿಯನ್ನು ಮುಟ್ಟುಗೋಲು ಹಾಕಿ ಕೊಂಡು, ಲೇಖಕರಾರ ಕೆ.ಎಸ್. ನಾರಾಯಣಾಚಾರ್ಯರ ವಿರುದ್ಧ ಕಾನೂನು ಕ್ರಮ ಕೈಗೊಂಡು ವಾಲ್ಮೀಕಿ ಜನಾಂಗಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ತಕ್ಷಣವೇ ಸರ್ಕಾರ ಕ್ರಮ ಕೈಗೊಳ್ಳ ದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ರಾಜ್ಯದೆ ಲ್ಲಡೆ ನಡೆಸಲಾಗುತ್ತದೆ  ಎಂದು ಸರ್ಕಾರಕ್ಕೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಘಟಕ ಎಚ್ಚರಿಸಿದೆ.

ವಾಲ್ಮೀಕಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಸಿ.ಬಿ.ಜಯರಾಂ ನಾಯಕ, ಜಿಲ್ಲಾ  ಘಟಕದ ಉಪಾಧ್ಯಕ್ಷ ಎನ್. ಮುದ್ದಪ್ಪ, ಜಿಲ್ಲಾ ನಿರ್ದೇಶಕ ಪಿ.ಮಂಜು ನಾಥ ನಾಯಕ, ಕಾವಲ್ಲಿ ಶಿವಪ್ಪ ನಾಯಕ, ಕೆ.ಬಾಲರಾಜ್, ಎಂ. ಹನುಮಂತಪ್ಪ, ಈಶಪ್ಪ, ಟಿ. ರಮೇಶ್, ಎಂ.ಶಿವಮೂರ್ತಿ ಪ್ರಸನ್ನ, ಲಕ್ಶ್ಮೀಪತಿ, ಡಿ.ಅನಿಲ್  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.