
ಬಳ್ಳಾರಿ: ನಗರದ ಉದ್ದಿಮೆದಾರರೊಬ್ಬರಿಗೆ ವಿಮೆ ಹೆಸರಿನಲ್ಲಿ ₹11.41 ಲಕ್ಷ ವಂಚನೆ ಮಾಡಲಾಗಿದೆ.
ಈ ಕುರಿತು ಬಳ್ಳಾರಿಯ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರುದಾರ ವ್ಯಕ್ತಿಗೆ ಈಚೆಗೆ ಕರೆ ಮಾಡಿದ್ದ ವಂಚಕರು, ನೀವು ಹೊಂದಿರುವ ವಿಮೆಗೆ ಈಗಲೇ ಹಣ ಪಾವತಿಸಿದರೆ ಶೇ 25ರಷ್ಟು ರಿಯಾಯಿತಿ ದೊರೆಯುವುದಾಗಿ ತಿಳಿಸಿದ್ದರು. ಅದನ್ನು ನಂಬಿದ ವ್ಯಕ್ತಿ ಹಣ ಪಾವತಿಗೆ ಮುಂದಾಗಿದ್ದರು. ಆಗ ಸಂಪರ್ಕ ಮಾಡಿದ್ದ ಅದೇ ಜಾಲದ ಮತ್ತೊಬ್ಬ ವಂಚಕ, ನಿಮ್ಮ 5 ವಿಮೆ ಪಾಲಿಸಿಗಳಿಂದ ₹8,90,874 ಹಣ ಏಜೆಂಟರಿಗೆ ಹೋಗುತ್ತಿದ್ದು, ಅದನ್ನು ಹಿಂದಕ್ಕೆ ಪಡೆಯಬೇಕಿದ್ದರೆ ₹60 ಸಾವಿರ ಹಣ ಪಾವತಿ ಮಾಡಿ ಎಂದು ತಿಳಿಸಿದ್ದರು.
ಇದನ್ನು ನಂಬಿದ ದೂರುದಾರ ವ್ಯಕ್ತಿ ಹಂತ ಹಂತವಾಗಿ ₹11,41,011 ಹಣವನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಿದ್ದಾರೆ. ಕೊನೆಗೆ ಇದು ವಂಚನೆ ಎಂದು ಅರಿತು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.