ADVERTISEMENT

ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆ: 20 ವಾರ್ಡ್‌ಗಳಿಗೆ 20 ಮತಗಟ್ಟೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 9:13 IST
Last Updated 17 ಮೇ 2019, 9:13 IST

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಗೆ 20 ವಾರ್ಡ್‌ಗಳಿಗೆ ತಲಾ ಒಂದು ಮತಗಟ್ಟೆ ಸ್ಥಾಪಿಸಲು ನಿರ್ಧರಿಸಲಾಗಿದೆ.

ವಾರ್ಡ್‌ ಸಂಖ್ಯೆ, ಮತಗಟ್ಟೆ ವಿವರ ಇಂತಿದೆ: ವಾರ್ಡ್‌ 1–ರ ಮತಗಟ್ಟೆ ಕಮಲಾಪುರದ ಜೈಭೀಮ ನಗರ ಸರ್ಕಾರಿ ಪ್ರಾಥಮಿಕ ಶಾಲೆ, ವಾರ್ಡ್‌ 2–ಜೆ.ಸಿ. ಶಾಲೆ, ವಾರ್ಡ್‌ 3–ಜಗದ್ಗುರು ಕೊಟ್ಟೂರೇಶ್ವರ ಶಾಲೆ, ವಾರ್ಡ್‌ 4–ಅಂಬೇಡ್ಕರ್‌ ನಗರದ ಸರ್ಕಾರಿ ಶಾಲೆ, ವಾರ್ಡ್‌ 5–ಅಂಬೇಡ್ಕರ್‌ ನಗರದ ಹೊಸ ಸರ್ಕಾರಿ ಶಾಲೆ ಕಟ್ಟಡ ಕೊಠಡಿ ಸಂಖ್ಯೆ–2, ವಾರ್ಡ್‌ 6–ಉರ್ದು ಶಾಲೆ ಕೊಠಡಿ ಸಂಖ್ಯೆ–2, ವಾರ್ಡ್‌ 7–ಎಚ್‌.ಪಿ.ಸಿ. ಕಮಲಾಪುರ ಶಾಲೆ, ವಾರ್ಡ್‌ 8–ನೀರು ಸರಬರಾಜು ಕೇಂದ್ರ ಸಮೀಪದ ಅಂಗನವಾಡಿ ಕೇಂದ್ರ14, ವಾರ್ಡ್‌ 9–ಈಶ್ವರ ದೇವಸ್ಥಾನ ಬಳಿಯ ಸರ್ಕಾರಿ ಶಾಲೆ, ವಾರ್ಡ್‌ 10–ವಿಜಯನಗರ ಕ್ಲಬ್‌ ಹತ್ತಿರದ ಅಂಗನವಾಡಿ ಕೇಂದ್ರ–7, ವಾರ್ಡ್‌ 11–ಜೆ.ಸಿ. ಸರ್ಕಾರಿ ಶಾಲೆ ಕೊಠಡಿ ಸಂಖ್ಯೆ–2, ವಾರ್ಡ್‌ 12– ನಾಡಕಚೇರಿ ಹತ್ತಿರದ ಅಂಗನವಾಡಿ ಕೇಂದ್ರ–22, ವಾರ್ಡ್‌ 13–ತೊಪ್ಪಲ ಚೆನ್ನಪ್ಪ ಸರ್ಕಾರಿ ಶಾಲೆ ಕೊಠಡಿ–1, ವಾರ್ಡ್‌14–ತೊಪ್ಪಲ ಚೆನ್ನಪ್ಪ ಸರ್ಕಾರಿ ಶಾಲೆ ಕೊಠಡಿ–2, ವಾರ್ಡ್‌ 15–ಸಿದ್ದೇಶ್ವರ ಶಾಲೆ ಕೊಠಡಿ–1, ವಾರ್ಡ್‌ 16–ಸಿದ್ದೇಶ್ವರ ಶಾಲೆ ಕೊಠಡಿ–2, ವಾರ್ಡ್‌ 17–ಹಳ್ಳಿಕೇರಿ ಸರ್ಕಾರಿ ಶಾಲೆ, ವಾರ್ಡ್‌ 18– ವಾಲ್ಮೀಕಿ ಸಮುದಾಯ ಭವನ, ವಾರ್ಡ್‌ 19–ತೊಪ್ಪಲ ಚೆನ್ನಪ್ಪ ಶಾಲೆ ಕೊಠಡಿ–3, ವಾರ್ಡ್‌ 20–ಕೆರೆತಾಂಡಾ ಸರ್ಕಾರಿ ಶಾಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT