ADVERTISEMENT

7 ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಪುರಸ್ಕಾರ

ಜಿಲ್ಲೆಯ 17 ಗ್ರಾಪ ಬಯಲು ಬಹಿರ್ದೆಸೆ ಮುಕ್ತ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 5:52 IST
Last Updated 3 ಅಕ್ಟೋಬರ್ 2017, 5:52 IST

ಬಳ್ಳಾರಿ: ‘ಜಿಲ್ಲೆಯ 17 ಗ್ರಾಮ ಪಂಚಾಯಿತಿಗಳು ಬಯಲು ಬಹಿರ್ದೆಸೆ ಮುಕ್ತವಾಗಿದ್ದು, ಈ ಪೈಕಿ 7 ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಪುರಸ್ಕಾರ ಲಭಿಸಿದೆ.

‘ಬೇಸ್ಲೈನ್ ಸಮೀಕ್ಷೆ 2012ರ ಪ್ರಕಾರ ಈ ಪುರಸ್ಕಾರ ಸಿಕ್ಕಿದೆ. ಅಕ್ಟೋಬರ್ 2ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏಳು ಗ್ರಾಮಗಳಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಅವರು ಪ್ರಶಸ್ತಿ ವಿತರಿಸಲಿದ್ದಾರೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಬೇಸ್‍ಲೈನ್ ಸಮೀಕ್ಷೆ ವರದಿಯನ್ನು ಪಡೆದು. ಪಟ್ಟಿಯಲ್ಲಿಲ್ಲದ ಫಲಾನುಭವಿಗಳಿಗೆ ಹೊಸ ಸೇರ್ಪಡೆ ಮಾಡಿ ಶೌಚಾಲಯ ನಿರ್ಮಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹೆಚ್ಚಿನ ಅನುದಾನ ಸಿಗುತ್ತಿದೆ. ಅಲ್ಲದೇ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ಪುರಸ್ಕಾರಕ್ಕೆ ಪಾತ್ರವಾದ ಗ್ರಾ.ಪಂ.ಗಳು: ಸೋಮಸಮುದ್ರ (ಬಳ್ಳಾರಿ ತಾಲ್ಲೂಕು), ಹ್ಯಾರಡ (ಹಡಗಲಿ), ಬ್ಯಾಸಿದಿಗೇರಿ(ಹಗರಿಬೊಮ್ಮನಳ್ಳಿ), ಹೊಸೂರು(ಹೊಸಪೇಟೆ), ಶಿವಪುರ(ಕೂಡ್ಲಿಗಿ), ದೇವಗಿರಿ (ಸಂಡೂರು), ಹಾಗೂ ಕುಡದರಹಾಳ್ (ಸಿರಗುಪ್ಪಾ).

ಸ್ವಚ್ಛ ಭಾರತ್ ಮಿಶನ್ ಅಡಿಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಪಂಗಳು(ತಾಲ್ಲೂಕುವಾರು): ಬಳ್ಳಾರಿ ತಾಲ್ಲೂಕು‌–ಕೊಳಗಲ್ಲು, ಕೊರ್ಲಗುಂದಿ, ಗೆಣಕಿಹಾಳ್, ಹಡಗಲಿ-ಹಗರನೂರು, ಹಗರಿಬೊಮ್ಮನಳ್ಳಿ–ಬೆಣ್ಣೆಕಲ್ಲು, ಹೊಸಪೇಟೆ-ಕಲ್ಲಹಳ್ಳಿ, ನಂ.10 ಮುದ್ದಾಪುರ, ಮಲಪನಗುಡಿ, ಬೈಲುವದ್ದಿಗೇರಿ, ಹೊಸೂರು, ಕೂಡ್ಲಿಗಿ- ಗಂಡಬೊಮ್ಮನಳ್ಳಿ, ಮೊರಬ್ಬ, ಗಂಡಬೊಮ್ಮಹಳ್ಳಿ, ಜರ್ಮಲಿ, ಸಂಡೂರು-ಭುಜಂಗನಗರ, ದೇವಗಿರಿ, ಸಿರಗುಪ್ಪಾ-ಕುಡದರಹಾಳ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.