ADVERTISEMENT

ಬಳ್ಳಾರಿ: ನಗರದಲ್ಲಿ ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 16:23 IST
Last Updated 25 ಡಿಸೆಂಬರ್ 2024, 16:23 IST
ನಗರದ ಮೇರಿ ಮಾತೆ ಚರ್ಚ್‌ನಲ್ಲಿ ಕ್ರೈಸ್ತ ಧರ್ಮೀಯರು ಬುಧವಾರ ಕ್ರಿಸ್‌ ಅಂಗವಾಗಿ ಪ್ರಾರ್ಥನೆ ಸಲ್ಲಿಸಿದರು.
ನಗರದ ಮೇರಿ ಮಾತೆ ಚರ್ಚ್‌ನಲ್ಲಿ ಕ್ರೈಸ್ತ ಧರ್ಮೀಯರು ಬುಧವಾರ ಕ್ರಿಸ್‌ ಅಂಗವಾಗಿ ಪ್ರಾರ್ಥನೆ ಸಲ್ಲಿಸಿದರು.   

ಬಳ್ಳಾರಿ: ನಗರದ ವಿವಿಧ ಚರ್ಚ್‌ಗಳಲ್ಲಿ ಬುಧವಾರ ಕ್ರಿಶ್ಚಿಯನ್‌ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಕ್ರಿಸ್‌ಮಸ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ನಗರದ ಕೋಟೆ ಪ್ರದೇಶ, ಕೌಲ್‌ಬಝಾರ್, ರೇಡಿಯೊ ಪಾರ್ಕ್, ಕಂಟೋನ್ಮಂಟ್, ತೇರುಬೀದಿ ಪ್ರದೇಶಗಳಲ್ಲಿರುವ ಮೇರಿ ಮಾತಾ ಚರ್ಚ್, ತೆಲುಗು, ತಮಿಳು, ಕನ್ನಡ ಚರ್ಚ್‌ಗಳಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ‘ಸಮಾಜದಲ್ಲಿ ಸುಖ, ಶಾಂತಿ ನೆಲೆಸುವಂತಾಗಲಿ. ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬದುಕಲಿ’ ಎಂದು ಶುಭ ಕೋರಲಾಯಿತು.

ಮಂಗಳವಾರ ಮಧ್ಯರಾತ್ರಿ ವಿವಿಧ ಚರ್ಚ್‌ಗಳಲ್ಲಿ ಆಯೋಜಿಸಿದ್ದ ವಿಶೇಷ ಪ್ರಾರ್ಥನೆ, ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮ, ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳಲ್ಲಿ ಸಾವಿರಾರುಭಕ್ತರು ಪಾಲ್ಗೊಂಡಿದ್ದರು. ಇತರ ಸಮುದಾಯದವರಿಗೂ ಶುಭ ಹಾರೈಸಲಾಯಿತು.

ADVERTISEMENT

ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದ್ದ ಚರ್ಚ್‌ಗಳು ರಾತ್ರಿ ವೇಳೆ ಝಗಮಗಿಸುತ್ತಿದ್ದರೆ, ನಗರದ ಕಂಟೋನ್‌ಮೆಂಟ್, ತಿಲಕ್‌ನಗರ, ಇಂದಿರಾನಗರ, ಕೊಳಗಲ್ ರಸ್ತೆ, ಬೆಳಗಲ್ ರಸ್ತೆ ಮತ್ತು ಕೋಟೆ ಪ್ರದೇಶಗಳಲ್ಲಿನ ಕ್ರಿಶ್ಚಿಯನ್ನರ ನಿವಾಸಗೆಳೆದುರು ಅಲಂಕೃತ ‘ಕ್ರಿಸ್‌ಮಸ್ ಟ್ರಿ’ ಬಂಧು ಬಾಂಧವರನ್ನು ಸ್ವಾಗತಿಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.