ADVERTISEMENT

ಸಂಡೂರು: ಶ್ರೀಗಂಧದ ಮರ ಕಡಿಯುತ್ತಿದ್ದ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 15:27 IST
Last Updated 27 ಜುಲೈ 2024, 15:27 IST
   

ಸಂಡೂರು(ಬಳ್ಳಾರಿ): ತಾಲ್ಲೂಕಿನ ರಾಮನಮಲೈ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದ ಸುಶೀಲಾ ನಗರದ ಮುತಾಲಿ ನಾಯಕ್ ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಗಂಧದ ಮರಗಳನ್ನು ಈ ಭಾಗದಲ್ಲಿ ಕಡಿಯಲಾಗುತ್ತಿದೆ ಎಂಬ ಮಾಹಿತಿ ಇತ್ತು. ಅರಣ್ಯ ಇಲಾಖೆ ಸಿಬ್ಬಂಧಿ ಗಸ್ತು ನಡೆಸುವಾಗ ಮರ ಕಡಿಯುತ್ತಿದ್ದ ಶಬ್ದ ಕೇಳಿ ಬಂದಿದೆ. ಆಗ ನಾಲ್ಕು ಕಡೆಯಿಂದ ಸುತ್ತವರೆದ ಸಿಬ್ಬಂಧಿ ಮುತಾಲಿ ನಾಯಕ್ ನನ್ನು ಬಂಧಿಸಿ ಸುಮಾರು ಒಂದು ಕೆಜಿಯಷ್ಟು ಗಂಧದ ಕಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಬಳ್ಳಾರಿ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಇಲ್ಲಿನ ಉತ್ತರ ವಲಯ ಅರಣ್ಯಾಧಿಕಾರಿ ಸಯ್ಯದ್ ದಾದಾ ಖಲಂದರ್ ತಿಳಿಸಿದ್ದಾರೆ‌.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.