ADVERTISEMENT

‘ಯುಜಿಸಿ ನಿಯಮದಂತೆ ಬಿವಿಎಗೆ ಪ್ರವೇಶ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 17:51 IST
Last Updated 5 ಸೆಪ್ಟೆಂಬರ್ 2020, 17:51 IST

ಹೊಸಪೇಟೆ: ‘ಯುಜಿಸಿ ಇತ್ತೀಚೆಗೆ ‘ಬ್ಯಾಚುಲರ್‌ ಆಫ್‌ ವಿಶ್ಯುವಲ್‌ ಆರ್ಟ್ಸ್‌’ (ಬಿವಿಎ) ಪದವಿ ಕೋರ್ಸ್‌ ಅನ್ನು ನಾಲ್ಕು ವರ್ಷ ಅವಧಿಗೆ ನಿಗದಿಗೊಳಿಸಿದೆ. ಹಾಗಾಗಿ ಬಿವಿಎ ಪ್ರಥಮ ವರ್ಷದ ಪ್ರವೇಶಕ್ಕೆ 10+2 ಅಥವಾ ತತ್ಸಮಾನ ಹೊಂದಿದವರನ್ನು ಪರಿಗಣಿಸಲಾಗುತ್ತಿದ್ದು, ಅದರಂತೆ ಪ್ರವೇಶ ನೀಡಲಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ಚಿತ್ರಕಲಾ ಮಹಾವಿದ್ಯಾಲಯಗಳ ಸಿಬ್ಬಂದಿ ಸಂಘದ ಅಧ್ಯಕ್ಷ ಬಿ.ಎಲ್‌. ಚವ್ಹಾಣ್‌ ತಿಳಿಸಿದ್ದಾರೆ.

‘ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಯಾವುದೇ ಕಲಾ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದವರಿಗೆ ಬಿವಿಎಗೆ ಪ್ರವೇಶ ನೀಡುತ್ತಿಲ್ಲ’ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT