ADVERTISEMENT

₹5 ಕೋಟಿ ವೆಚ್ಚದಲ್ಲಿ ಅಲೆಮಾರಿ ಭವನ: ಸಚಿವ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 15:54 IST
Last Updated 24 ಫೆಬ್ರುವರಿ 2024, 15:54 IST
ಬಳ್ಳಾರಿಯ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅಲೆಮಾರಿ ಜಾಗೃತಿ ಸಮಾವೇಶವನ್ನು ಸಚಿವ ಬಿ. ನಾಗೇಂದ್ರ ಉದ್ಘಾಟಿಸಿದರು. ಕಂಪ್ಲಿ ಶಾಸಕ ಗಣೇಶ್‌, ಮಾಜಿ ಸಂಸದ ಉಗ್ರಪ್ಪ, ಮೇಯರ್‌ ಬಿ. ಶ್ವೇತಾ ಪಾಲ್ಗೊಂಡಿದ್ದರು
ಬಳ್ಳಾರಿಯ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅಲೆಮಾರಿ ಜಾಗೃತಿ ಸಮಾವೇಶವನ್ನು ಸಚಿವ ಬಿ. ನಾಗೇಂದ್ರ ಉದ್ಘಾಟಿಸಿದರು. ಕಂಪ್ಲಿ ಶಾಸಕ ಗಣೇಶ್‌, ಮಾಜಿ ಸಂಸದ ಉಗ್ರಪ್ಪ, ಮೇಯರ್‌ ಬಿ. ಶ್ವೇತಾ ಪಾಲ್ಗೊಂಡಿದ್ದರು   

ಬಳ್ಳಾರಿ: ‘ಜಿಲ್ಲೆಯಲ್ಲಿನ ಅಲೆಮಾರಿ ಜನಾಂಗದವರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇತರೆ ಚಟುವಟಿಕೆಳಿಗಾಗಿ ₹5 ಕೋಟಿ ವೆಚ್ಚದಲ್ಲಿ ಸರ್ಕಾರದಿಂದ ಅಲೆಮಾರಿ ಭವನ ನಿರ್ಮಿಸಿಕೊಡಲಾಗುವುದು’ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಭರವಸೆ ನೀಡಿದರು.

ಇಲ್ಲಿನ ವಾಲ್ಮೀಕಿ ಭವನದಲ್ಲಿ ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ., ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ‘ಅಲೆಮಾರಿ ಜಾಗೃತಿ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘1 ಎಕರೆ ಸರ್ಕಾರಿ ಸ್ಥಳದಲ್ಲಿ ಭವನ ನಿರ್ಮಿಸಲಾಗುವುದು. ಜಾಗ ಲಭ್ಯವಿದ್ದ ಕಡೆ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಕ್ಕೆ ನಿವೇಶನ ಒದಗಿಸಲಾಗುವುದು. ವಸತಿ ಇದ್ದು, ಮನೆ ಕಟ್ಟಲು ಸಾಧ್ಯವಾಗದವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು’ ಎಂದರು.

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ‘ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅಲೆಮಾರಿ ಸಮುದಾಯಗಳಿಗೆ ಒದಗಿಸಿಕೊಡಲು ಪ್ರಯತ್ನಿಸುತ್ತೇನೆ’ ಎಂದರು.

ADVERTISEMENT

ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ‘ಅಲೆಮಾರಿಗಳೊಂದಿಗೆ ನಾನು ಇರುತ್ತೇನೆ. ಗುಡಾರ ನಗರದಲ್ಲಿರುವ ಎಲ್ಲರಿಗೂ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತೇನೆ’ ಎಂದು ಭರವಸೆ ನೀಡಿದರು. 

ಕರ್ನಾಟಕ ಎಸ್.ಸಿ., ಎಸ್.ಟಿ., ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ‘ಅಲೆಮಾರಿಗಳು ಜಾಗೃತರಾಗಬೇಕು. ಶಿಕ್ಷಣ ಪಡೆಯಬೇಕು. ಹೋರಾಟಗಳ ಮೂಲಕ ಸರ್ಕಾರಗಳ ಕಣ್ಣು ತೆರೆಸಬೇಕು. ಅಲೆಮಾರಿಗಳಿಗೆ ನಿವೇಶನ, ವಸತಿ ಸೌಕರ್ಯದ ಜೊತೆಗೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸಿಕೊಡಬೇಕು’ ಎಂದು ಆಗ್ರಹಿಸಿದರು. 

ಮಾಜಿ ಸಂಸದ ವಿಎಸ್ ಉಗ್ರಪ್ಪ, ಬಳ್ಳಾರಿ ಪಾಲಿಕೆ ಮೇಯರ್ ಬಿ. ಶ್ವೇತಾ , ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ, ಅಲೆಮಾರಿ–ಅರೆ ಅಲೆಮಾರಿ ಸಮುದಾಯ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಶೇಷಪ್ಪ, ರಾಜ್ಯ ಎಸ್.ಸಿ., ಎಸ್.ಟಿ., ಬುಡಕಟ್ಟು ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಕೆ.ವೀರೇಶ್, ಅಲೆಮಾರಿ ಸಮುದಾಯಗಳ ಮುಖಂಡರಾದ ರಾಮಾಂಜಿನಿ, ಇತರರು ಇದ್ದರು. 

ಟವರ್‌ ಕ್ಲಾಕ್‌ ನಿರ್ಮಾಣಕ್ಕೆ ಅಡಿಗಲ್ಲು: ₹4.75 ಕೋಟಿ ವೆಚ್ಚದಲ್ಲಿ ಕೌಲ್ ಬಜಾರ್ ಫಸ್ಟ್ ಗೇಟ್‌ನಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ಸರ್ಕಲ್ ಧ್ವಜ ಸ್ತಂಭ ಹಾಗೂ ಟವರ್ ಕ್ಲಾಕ್ ನಿರ್ಮಾಣದ ಕಾಮಗಾರಿಗೆ ಸಚಿವ ಬಿ.ನಾಗೇಂದ್ರ  ಅಡಿಗಲ್ಲು ಹಾಕಿದರು. ಮೇಯರ್ ಬಿ.ಶ್ವೇತಾ, ಪಾಲಿಕೆ ಸದಸ್ಯೆ ಜಿ.ಶಿಲ್ಪಾ, ಕಾಂಗ್ರೆಸ್ ಮುಖಂಡರು ಹಾಜರಿದ್ದರು.

4.75 ಕೋಟಿ ವೆಚ್ಚದಲ್ಲಿ ಕೌಲ್ ಬಜಾರ್ ಫಸ್ಟ್ ಗೇಟ್‌ನಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ಸರ್ಕಲ್ ಧ್ವಜ ಸ್ತಂಭ ಹಾಗೂ ಟವರ್ ಕ್ಲಾಕ್ ನಿರ್ಮಾಣದ ಕಾಮಗಾರಿಗೆ ಸಚಿವ ಬಿ ನಾಗೇಂದ್ರ  ಅಡಿಗಲ್ಲು ಹಾಕಿದರು. ಮೇಯರ್ ಬಿ.ಶ್ವೇತಾ ಪಾಲಿಕೆ ಸದಸ್ಯೆ ಜಿ.ಶಿಲ್ಪಾ ಸೇರಿದಂತೆ ಕೌಲ್ ಬಜಾರ್ ಭಾಗದ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.