ADVERTISEMENT

ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು: ಶೆಡ್ ಮೇಲೆ ಶಾಸಕ ಗಣೇಶ್ ದಾಳಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 20:48 IST
Last Updated 23 ಜುಲೈ 2022, 20:48 IST
ಕಂಪ್ಲಿ ತಾಲ್ಲೂಕು ನಂ.10 ಮುದ್ದಾಪುರ ಗ್ರಾಮ ವ್ಯಾಪ್ತಿಯ ಗೌರಮ್ಮ ಕೆರೆಗೆ ಹೋಗುವ ರಸ್ತೆಯಲ್ಲಿರುವ ಶೆಡ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನ ಭಾಗ್ಯ ಅಕ್ಕಿ. ಶಾಸಕ ಜೆ.ಎನ್. ಗಣೇಶ್, ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಚಂದ್ರಶೇಖರ್ ಹಿರೇಮಠ್ ಇದ್ದಾರೆ
ಕಂಪ್ಲಿ ತಾಲ್ಲೂಕು ನಂ.10 ಮುದ್ದಾಪುರ ಗ್ರಾಮ ವ್ಯಾಪ್ತಿಯ ಗೌರಮ್ಮ ಕೆರೆಗೆ ಹೋಗುವ ರಸ್ತೆಯಲ್ಲಿರುವ ಶೆಡ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನ ಭಾಗ್ಯ ಅಕ್ಕಿ. ಶಾಸಕ ಜೆ.ಎನ್. ಗಣೇಶ್, ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಚಂದ್ರಶೇಖರ್ ಹಿರೇಮಠ್ ಇದ್ದಾರೆ   

ಕಂಪ್ಲಿ: ತಾಲ್ಲೂಕಿನ ನಂ.10 ಮುದ್ದಾಪುರ ಗ್ರಾಮ ವ್ಯಾಪ್ತಿಯ ಗೌರಮ್ಮ ಕೆರೆಗೆ ಹೋಗುವ ರಸ್ತೆಯಲ್ಲಿದ್ದ ಅನ್ನಭಾಗ್ಯ ಅಕ್ಕಿ ದಾಸ್ತಾನಿನ ಶೆಡ್ ಮೇಲೆ ಶಾಸಕ ಜೆ.ಎನ್. ಗಣೇಶ್ ಶನಿವಾರ ರಾತ್ರಿ ದಾಳಿ ನಡೆಸಿದರು.

‘ಶೆಡ್‍ನಲ್ಲಿ 50 ಕೆ.ಜಿ ತೂಕದ ಅಂದಾಜು ಒಂದು ಸಾವಿರ ಅಕ್ಕಿ ಚೀಲಗಳು ದಾಸ್ತಾನು ಇದೆ. ಬಡವರಿಗೆ ವಿತರಣೆಯಾಗಬೇಕಾದ ಅನ್ನಭಾಗ್ಯ ಅಕ್ಕಿಯನ್ನು ಕಳೆದ ಒಂದು ವರ್ಷದಿಂದ ಗುಜರಾತ್ ಮತ್ತು ಬಿಹಾರ ರಾಜ್ಯಗಳಿಗೆ ಈ ಭಾಗದಿಂದ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇದರ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ಕ್ರಮ ತೆಗೆದುಕೊಳ್ಳಬೇಕು’ ಎಂದು ಗಣೇಶ್ ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದಾಗ ಅಕ್ಕಿ ಚೀಲಗಳನ್ನು ಲಾರಿಗೆ ಲೋಡ್ ಮಾಡಲಾಗುತ್ತಿತ್ತು. ಶೆಡ್ ಬಳಿ ಇದ್ದ ಕೆಲವರು ಪರಾರಿಯಾದರು ಎಂದು ಶಾಸಕ ಮಾಹಿತಿ ನೀಡಿದರು.

ADVERTISEMENT

ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಭೇಟಿ: ‘ಅಕ್ರಮ ಮರಳು ಗಣಿಗಾರಿಕೆ, ಸಾಗಾಣಿಕೆ ತಡೆಯುವ ಉದ್ದೇಶದಿಂದ ಗಸ್ತು ತಿರುಗುತ್ತಿದ್ದ ವೇಳೆ ಗೌರಮ್ಮ ಕೆರೆ ರಸ್ತೆಯಲ್ಲಿ ಜನ– ವಾಹನ ಸಂಚಾರ ಕಂಡುಬಂತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅಕ್ರಮ ಅಕ್ಕಿ ದಾಸ್ತಾನು ಕಂಡುಬಂತು. ಕೂಡಲೇ ಆಹಾರ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದೆ’ ಎಂದು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಚಂದ್ರಶೇಖರ್ ಹಿರೇಮಠ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.