
ಎಫ್‌ಐಆರ್
ಪ್ರಜಾವಾಣಿ ವಾರ್ತೆ
ಬಳ್ಳಾರಿ: ಬಳ್ಳಾರಿಯ ಮಹಿಳಾ ಕಾಂಗ್ರೆಸ್‌ನಲ್ಲಿ ಮತ್ತೊಂದು ಹಂತದ ಗಲಾಟೆಗಳು ನಡೆದಿದ್ದು, ಇನ್ನೊಂದು ದೂರು ದಾಖಲಾಗಿದೆ.
ಕಾಂಗ್ರೆಸ್‌ನಲ್ಲಿರುವ ಎರಡು ಮಹಿಳಾ ಗುಂಪುಗಳ ನಡುವೆ ಈಗಾಗಲೇ ಒಂದು ಹಂತದ ಗಲಾಟೆ ನಡೆದಿದ್ದು, ಈ ಸಂಬಂಧ ಪರಸ್ಪರರು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಈ ಮಧ್ಯೆ ಕಳೆದ ನವೆಂಬರ್ 28ರಂದು ಮತ್ತೆ ಗಲಾಟೆ ಆಗಿದೆ. ಪದ್ಮಾ, ರೋಹಿಣಿ ಮತ್ತು ಲಕ್ಷ್ಮೀ ದೇವಿ ಎಂಬುವವರನ್ನು ರಾಜ್‌ಕುಮಾರ್ ಪಾರ್ಕ್‌ಗೆ ಕರೆಸಿಕೊಂಡಿದ್ದ ಯಶೋಧಾ ಎಂಬುವವರು ಸಂಧಾನ ಮಾಡಿಸುತ್ತಿದ್ದರು. ಈ ವೇಳೆ ಮಮತಾ ಎಂಬುವವರು ಲಕ್ಷ್ಮೀದೇವಿ ಎಂಬುವವರನ್ನು ಏಕಾಏಕಿ ನಿಂದಿಸಿದ್ದೂ ಅಲ್ಲದೇ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಲಕ್ಷ್ಮೀದೇವಿ ಅವರನ್ನು ಬಿಡಿಸಿಕೊಳ್ಳಲು ಬಂದ ಪದ್ಮಾ, ರೋಹಿಣಿ ಅವರ ಮೇಲೂ ಮಮತಾ ಹಲ್ಲೆ ಮಾಡಿದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ಡಿ. 18ರಂದು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.