ಅರ್ಜಿ ಆಹ್ವಾನ
ಕುರುಗೋಡು: ಪಟ್ಟಣದಲ್ಲಿನ ಸರ್ಕಾರಿ ಕೈಗಾರಿಕಾ ಸಂಸ್ಥೆ(ಐಟಿಐ)ಯಲ್ಲಿ ಪ್ರಸ್ತಕ ಸಾಲಿಗೆ ವಿವಿಧ ವೃತ್ತಿ ಘಟಕಗಳಿಗೆ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ವೆಬ್‌ಸೈಟ್ ವಿಳಾಸ www.cite.karnataka.gov.inಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದ್ದು, ಇಲ್ಲವೇ ನೇರವಾಗಿ ಸಂಸ್ಥೆಗೆ ಭೇಟಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಮೇ 28 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದ ಸಂಸ್ಥೆಯಲ್ಲಿ ಮಾತ್ರ ದಾಖಲೆ ಪರಿಶೀಲನೆಗೆ ಕಡ್ಡಾಯವಾಗಿ ಹಾಜರಾಗಬೇಕು.
ವೃತ್ತಿಗಳ ವಿವರ: 2 ವರ್ಷದ ಎಲೆಕ್ಟ್ರಿಷಿಯನ್ (ಎನ್‌ಸಿವಿಟಿ), 2 ವರ್ಷದ ಫಿಟ್ಟರ್ (ಎನ್‌ಸಿವಿಟಿ), 2 ವರ್ಷದ ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ (ಎನ್‌ಸಿವಿಟಿ), 2 ವರ್ಷದ ಸಿಎನ್‌ಸಿ ಮಷಿನಿಂಗ್ ಟೆಕ್ನಿಷಿಯನ್, ವರ್ಚುವಲ್ ಅನಾಲಿಸಿಸ್ ಮತ್ತು ಡಿಸೈನರ್-ಫೆಮ್ (ಫಿನೈಟ್ ಎಲಿಮೆಂಟ್ ಮೆಥಡ್) (ಎನ್‌ಸಿವಿಟಿ) 2 ವರ್ಷದ ಕೋರ್ಸ್, ಇಂಡಸ್ಟ್ರಿಯಲ್ ರೊಬೊಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಿಷಿಯನ್ (ಎನ್‌ಸಿವಿಟಿ) 1 ವರ್ಷದ ಕೋರ್ಸ್, ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಮತ್ತು ಆಟೊಮೇಷನ್ (ಎನ್‌ಸಿವಿಟಿ) 1 ವರ್ಷ ಮತ್ತು ಎಂಜಿನಿಯರಿಂಗ್ ಡಿಸೈನ್ ಟೆಕ್ನಿಷಿಯನ್ (ಎನ್‌ಸಿವಿಟಿ) 1 ವರ್ಷ.
ಮಾಹಿತಿಗಾಗಿ ಕುರುಗೋಡಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ವಿ. ತಿಮ್ಮರಾಜು ಮೊ: 9980715718, ಸತೀಶ್ ಡಿ.ಜಿ ಮೊ: 9481175925, ಮಹೇಶ್ ಟಿ. ಮೊ: 7892431265, ಓಬಳೇಶ ಎಂ. ಮೊ:9108127275, ರಾಜಶೇಖರ ಪಿ.ಜಿ ಮೊ: 7975845633 ನ್ನು ಸಂಪರ್ಕಿಸಬಹುದು ಎಂದು ಪ್ರಾಚಾರ್ಯ ವಿ. ತಿಮ್ಮರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.