ADVERTISEMENT

ಮಹಿಳೆಯರಿಗೆ ಆಟೊ ಚಾಲನೆ ತರಬೇತಿ

​ಪ್ರಜಾವಾಣಿ ವಾರ್ತೆ
Published 1 ಮೇ 2019, 13:19 IST
Last Updated 1 ಮೇ 2019, 13:19 IST
ಮಹಿಳೆಯರಿಗೆ ಆಟೊ ಓಡಿಸುವ ತರಬೇತಿಗೆ ಭಾಗ್ಯಲಕ್ಷ್ಮಿ ಭರಾಡೆ ಚಾಲನೆ ನೀಡಿದರು
ಮಹಿಳೆಯರಿಗೆ ಆಟೊ ಓಡಿಸುವ ತರಬೇತಿಗೆ ಭಾಗ್ಯಲಕ್ಷ್ಮಿ ಭರಾಡೆ ಚಾಲನೆ ನೀಡಿದರು   

ಹೊಸಪೇಟೆ: ಮಹಿಳೆಯರಿಗೆ ಹಮ್ಮಿಕೊಂಡಿರುವ ಆಟೊ ಚಲಾಯಿಸುವ ತರಬೇತಿಗೆ ಬುಧವಾರ ನಗರದಲ್ಲಿ ಚಾಲನೆ ನೀಡಲಾಯಿತು.

‘ವುಮೆನ್‌ ಅಂಡ್‌ ಚೈಲ್ಡ್‌ ಟ್ರಸ್ಟ್‌’ನ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಭರಾಡೆ ಚಾಲನೆ ನೀಡಿ, ‘ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಆಟೊ ಓಡಿಸುವ ತರಬೇತಿ ನೀಡಲಾಗುತ್ತಿದೆ. ಇದರಿಂದ ಮಹಿಳೆಯರು ಕೂಡ ಪುರುಷರಿಗೆ ಸರಿಸಮಾನವಾಗಿ ಸಮಾಜದಲ್ಲಿ ಕೆಲಸ ಮಾಡಲು ಸಹಕಾರಿಯಾಗುತ್ತದೆ’ ಎಂದರು.

‘ನನಗೆ ಸೇರಿದ ಬರೋಡೆ ಟ್ರಸ್ಟಿನಿಂದ ಮೊದಲ ಬಾರಿಗೆ ಮಹಿಳೆಯರ ಸಬಲೀಕರಣಕ್ಕಾಗಿ ಈ ಕಾರ್ಯಕ್ರಮ ರೂಪಿಸಿರುವೆ. ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

ಡಾನ್ ಬಾಸ್ಕೊ ಶಾಲೆಯ ಮುಖ್ಯ ಗುರು ಫಾದರ್. ಜೂಡ್ ಆನಂದ್, ಕಾರ್ಮಿಕ ಇಲಾಖೆಯ ಪರಶುರಾಮ, ಕರ್ನಾಟಕ ರಕ್ಷಣ ವೇದಿಕೆ ಆಟೊ ಚಾಲಕರ ಸಂಘದ ಅಧ್ಯಕ್ಷ ಹುಲಿಗೆಪ್ಪ, ತರುಣಿ ಮಹಿಳಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಹನುಮಂತಮ್ಮ, ಸಲಹೆಗಾರ ಸೈಯದ್ ಹೈದರ್, ಸಿಸ್ಟರ್ ಸೀಮಾ, ಸಂಯೋಜಕಿ ಸಾವಿತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.