ADVERTISEMENT

ರೈಲ್ವೆ ಸಲಹಾ ಸಮಿತಿಗೆ ಜೈನ್‌ ಆಯ್ಕೆ, ಸನ್ಮಾನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 12:29 IST
Last Updated 19 ಡಿಸೆಂಬರ್ 2019, 12:29 IST
ರಾಷ್ಟ್ರೀಯ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಬಾಬುಲಾಲ್‌ ಜೈನ್‌ ಅವರನ್ನು ಗುರುವಾರ ಹೊಸಪೇಟೆಯಲ್ಲಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿದರು
ರಾಷ್ಟ್ರೀಯ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಬಾಬುಲಾಲ್‌ ಜೈನ್‌ ಅವರನ್ನು ಗುರುವಾರ ಹೊಸಪೇಟೆಯಲ್ಲಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿದರು   

ಹೊಸಪೇಟೆ: ರಾಷ್ಟ್ರೀಯ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ಬಾಬುಲಾಲ್‌ ಜೈನ್‌ ಅವರು ಆಯ್ಕೆಗೊಂಡಿದ್ದಕ್ಕೆ ಗುರುವಾರ ನಗರದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ನೆರವೇರಿಸಿ ಮಾತನಾಡಿದ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್‌, ‘ಇಡೀ ರಾಜ್ಯದಿಂದ ಸಮಿತಿಗೆ ಆಯ್ಕೆಯಾಗಿರುವ ಏಕೈಕ ಪ್ರತಿನಿಧಿ ಹೊಸಪೇಟೆಯವರು ಎನ್ನುವುದು ಹೆಮ್ಮೆಯ ಸಂಗತಿ. ರಾಜ್ಯದ ರೈಲ್ವೆ ಬೇಡಿಕೆಗಳ ಕುರಿತು ಧ್ವನಿಯೆತ್ತಲು ಆನೆ ಬಲ ಬಂದಂತಾಗಿದೆ’ ಎಂದರು.

‘ಹೊಸಪೇಟೆ–ಕೊಟ್ಟೂರು–ದಾವಣಗೆರೆ ಮಧ್ಯೆ ಹಾಲಿ ಸಂಚರಿಸುತ್ತಿರುವ ರೈಲಿನಿಂದ ಜನರಿಗೆ ಪ್ರಯೋಜನವಾಗುತ್ತಿಲ್ಲ. ಅದರ ವೇಳಾಪಟ್ಟಿ ಬದಲಿಸಬೇಕು. ವಿಜಯಪುರ–ಯಶವಂತಪುರ ವಿಶೇಷ ಎಕ್ಸಪ್ರೆಸ್‌ ರೈಲಿನ ಪ್ರಯಾಣ ದರ ತಗ್ಗಿಸಿ, ಹಿರಿಯ ನಾಗರಿಕರಿಗೆ ರಿಯಾಯಿತಿ ಸೌಲಭ್ಯ ಕಲ್ಪಿಸುವ ಸಂಬಂಧ ಜೈನ್‌ ಅವರು ಧ್ವನಿ ಎತ್ತಬೇಕು’ ಎಂದು ಕೋರಿದರು.

ADVERTISEMENT

ಕ್ರಿಯಾ ಸಮಿತಿ ಕಾರ್ಯದರ್ಶಿ ಕೆ.ಮಹೇಶ್, ಸದಸ್ಯರಾದ ಅಶೋಕ್ ಜೀರೆ, ಚಂದ್ರಕಾಂತ್ ಕಾಮತ್, ಶಾಮಪ್ಪ ಅಗೋಲಿ, ರಾಮಕೃಷ್ಣ, ತಿಪ್ಪೇಸ್ವಾಮಿ, ಯು.ಅಶ್ವತ್ಥಪ್ಪ, ಮಲ್ಲಿಕಾರ್ಜುನ, ಭೋಜರಾಜ, ಕುಮಾರ ಸ್ವಾಮಿ, ದೀಪಕ್‍ಹುಳ್ಳಿ, ಪ್ರಭಾಕರ್, ಶಿವಪುತ್ರಪ್ಪ, ಓಂಕಾರೇಶ್, ಸೋಮಣ್ಣ, ಮರಿಯಪ್ಪ, ವಿಶ್ವನಾಥ ಕೌತಾಳ್, ದೇವರೆಡ್ಡಿ, ನಾಗೇಶ್, ಪೀರಾನ್ ಸಾಬ್, ತಮಿಳು ಸಂಘದ ಲೋಗನಾಥನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.