ADVERTISEMENT

ಮೆಂಥೋಪ್ಲಸ್‌ನ ಚಿಕ್ಕ ಡಬ್ಬಿ ನುಂಗಿ ಮಗು ಸಾವು 

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 14:07 IST
Last Updated 9 ಜೂನ್ 2023, 14:07 IST
ಪ್ರಿಯದರ್ಶಿನಿ
ಪ್ರಿಯದರ್ಶಿನಿ   

ಕಂಪ್ಲಿ (ಬಳ್ಳಾರಿ ಜಿಲ್ಲೆ): ತಲೆನೋವಿಗೆ ಬಳಸುವ ಮೆಂಥೋಪ್ಲಸ್ (₹ 2 ಮೌಲ್ಯದ) ಚಿಕ್ಕ ಡಬ್ಬಿ ನುಂಗಿ ಪ್ರಿಯದರ್ಶಿನಿ ಎಂಬ 9 ತಿಂಗಳ ಮಗು ಉಸಿರುಗಟ್ಟಿ ಮೃತಪಟ್ಟ ಘಟನೆ ಪಟ್ಟಣದ 5ನೇ ವಾರ್ಡ್‌ ಇಂದಿರಾನಗರದಲ್ಲಿ ಶುಕ್ರವಾರ ನಡೆದಿದೆ.

ಪಟ್ಟಣದ ನಿವಾಸಿಗಳಾದ ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ ಏಕೈಕ ಪುತ್ರಿ ಪ್ರಿಯದರ್ಶಿನಿ ಮನೆಯಲ್ಲಿ ಆಡುವಾಗ ಮೆಂಥೋಪ್ಲಸ್ ಡಬ್ಬಿ ನುಂಗಿದ್ದಾಳೆ. ಆಕೆ ಅಳುತ್ತಾ ಬಂದಾಗ, ತುಳಸಿ ಅವರು ಗಂಟಲಲ್ಲಿ ಸಿಲುಕಿದ್ದ ಡಬ್ಬಿ ತೆೆಗೆಯಲು ಪ್ರಯತ್ನಿಸಿದ್ದಾರೆ. ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ತಕ್ಷಣವೇ ವೈದ್ಯರ ಬಳಿ ಮಗುವನ್ನು ಕರೆದೊಯ್ಯಲಾಗಿದೆ. ಆದರೆ, ಪ್ರಯೋಜನವಾಗಲಿಲ್ಲ. ಈ ದಂಪತಿಗೆ ವಿವಾಹವಾಗಿ 10ವರ್ಷಗಳ ಬಳಿಕ ಮಗು ಜನಿಸಿತ್ತು.

‘ಆಸ್ಪತ್ರೆಗೆ ಬರುವ ಮಾರ್ಗಮಧ್ಯೆಯೇ ಮಗು ಮೃತಪಟ್ಟಿತ್ತು. ಆದರೂ ಪಾಲಕರು ಕೋರಿದಾಗ, ಗಂಟಲಲ್ಲಿದ್ದ ಡಬ್ಬಿ ಹೊರ ತೆಗೆಯಲಾಯಿತು’ ಎಂದು ಮಕ್ಕಳ ವೈದ್ಯೆ ಡಾ.ಕಲ್ಪನಾ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.