
ಪ್ರಜಾವಾಣಿ ವಿಶೇಷಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಕೆಗೆ ಸಂಬಂಧ ನಡೆದ ಗಲಾಟೆ, ಸಾವಿನೊಂದಿಗೆ ಅಂತ್ಯಗೊಂಡ ನಂತರ ರೆಡ್ಡಿಗಳ ನಡುವೆ ವಾಕ್ಸಮರ ಮುಂದುವರಿದಿದೆ. ಇನ್ನು, ಮೃತ ರಾಜಶೇಖರ್ ಅವರಿಗೆ ‘12 ಎಂಎಂ, ಸಿಂಗಲ್ ಬೋರ್’ ಬಂದೂಕಿನಿಂದ ಗುಂಡು ಬಿದ್ದಿರುವುದು ದೃಢ. ಮೃತದೇಹದ ಒಳಗೆ ಗುಂಡಿನ ಪ್ಲಾಸ್ಟಿಕ್ ವಾರ್ಡ್ ಪತ್ತೆಯಾಗಿದ್ದು ಇದು ಶಾಸಕ ಭರತ್ ರೆಡ್ಡಿ ಆಪ್ತರೊಬ್ಬರ ಖಾಸಗಿ ಅಂಗರಕ್ಷಕನೊಬ್ಬನ ಬಂದೂಕಿನೊಂದಿಗೆ ಹೊಂದಾಣಿಕೆಯಾಗುತ್ತಿದೆ ಎಂದು ಪೊಲೀಸ್ ಇಲಾಖೆಯ ಖಚಿತ ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.