ADVERTISEMENT

ಬಳ್ಳಾರಿ | ಸಿಎಂ ಬೇಗುದಿ ಬಯಲು: ಕೇಂದ್ರ ಸಚಿವ ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 19:27 IST
Last Updated 11 ಜುಲೈ 2025, 19:27 IST
ಸೋಮಣ್ಣ
ಸೋಮಣ್ಣ   

ಬಳ್ಳಾರಿ: ‘ಉಪ ಮುಖ್ಯಮಂತ್ರಿಗೆ ಶಾಸಕರ ಬೆಂಬಲ ಇಲ್ಲ ಎಂದು ಸಿ.ಎಂ ಆದವರು ಮಾತನಾಡುವುದು ಅಪಹಾಸ್ಯ, ಅವರ ಅಂತರಾಳದ ಬೇಗುದಿಯನ್ನು ಇದು ಬಯಲು ಮಾಡಿದೆ’ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು. 

‘ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅವರೇ ಬರೆದುಕೊಟ್ಟಿದ್ದಾರೆ. ಅದನ್ನು ಅವರ ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ. ಆದರೆ, ರಾಜ್ಯ ಸರ್ಕಾರ ಸತ್ತಿದೆ. ಜನರನ್ನು ಕತ್ತಲೆ ಕೋಣೆಯಲ್ಲಿ ಕೂರಿಸಲಾಗಿದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯದಲ್ಲಿ ಒಂದೆಡೆ ಶಿವಕುಮಾರ್‌, ಇನ್ನೊಂದು ಕಡೆ ಸಿದ್ದರಾಮಯ್ಯ ಎಂಬಂತೆ ಆಗಿದೆ. ಅದು ಬಿಟ್ಟು ಜನತೆಗೆ ಏನಾದರೂ ಒಳಿತು ಮಾಡಿ’ ಎಂದು ಸಲಹೆ ನೀಡಿದರು. 

ADVERTISEMENT

ಅಧ್ಯಕ್ಷನಾಗುವ ಆಸೆ ಇಲ್ಲ: ‌‘ಪ್ರಧಾನಿ ಮೋದಿ ನನಗೊಂದು ಕೆಲಸ ಕೊಟ್ಟಿದ್ದಾರೆ. ಹೀಗಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.