ADVERTISEMENT

ಬಳ್ಳಾರಿ ಪಾಲಿಕೆ ಬಜೆಟ್‌, ಸಾಮಾನ್ಯ ಸಭೆ ಮುಂದೂಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:37 IST
Last Updated 12 ಫೆಬ್ರುವರಿ 2026, 7:37 IST
ಇದೇ 16ರಂದು ನಿಗದಿಯಾಗಿರುವ ಬಳ್ಳಾರಿ ಪಾಲಿಕೆಯ ಬಜೆಟ್ ಮತ್ತು ಸಾಮಾನ್ಯ ಸಭೆಯನ್ನು ಮುಂದೂಡಬೇಕು ಎಂದು ಹಲವು ಕಾರ್ಪೊರೇಟರ್‌ಗಳು ಪಾಲಿಕೆ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದರು
ಇದೇ 16ರಂದು ನಿಗದಿಯಾಗಿರುವ ಬಳ್ಳಾರಿ ಪಾಲಿಕೆಯ ಬಜೆಟ್ ಮತ್ತು ಸಾಮಾನ್ಯ ಸಭೆಯನ್ನು ಮುಂದೂಡಬೇಕು ಎಂದು ಹಲವು ಕಾರ್ಪೊರೇಟರ್‌ಗಳು ಪಾಲಿಕೆ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದರು   

ಬಳ್ಳಾರಿ: ಇದೇ 16ರಂದು ನಿಗದಿಯಾಗಿರುವ ಪಾಲಿಕೆಯ ಬಜೆಟ್ ಮತ್ತು ಸಾಮಾನ್ಯ ಸಭೆಯನ್ನು ಮುಂದೂಡಬೇಕು ಎಂದು ಹಲವು ಕಾರ್ಪೊರೇಟರ್‌ಗಳು ಪಾಲಿಕೆ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.  

‘ಪಾಲಿಕೆಯ 2026-27ನೇ ಸಾಲಿನ ವಾರ್ಷಿಕ ಬಜೆಟ್‌ ಮತ್ತು ಸಾಮಾನ್ಯ ಸಭೆಯ ಸೂಚನಾ ಪತ್ರವನ್ನು ಎಲ್ಲಾ ಸದಸ್ಯರಿಗೆ ನೀಡಲಾಗಿದೆ. ಆದರೆ ಬಜೆಟ್‌  ಕುರಿತು ಪಾಲಿಕೆಯ ಸದಸ್ಯರ ಜೊತೆ ಪೂರ್ವಭಾವಿ ಸಭೆ ನಡೆಸಿಲ್ಲ.  ಸಾಮಾನ್ಯ ಸಭೆಯ ಕಾರ್ಯಸೂಚಿಯಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಎಲ್ಲಾ ಸದಸ್ಯರ ಜೊತೆ ಚರ್ಚೆ ಮಾಡಿಲ್ಲ. ಹಲವು ವಿಷಯಗಳನ್ನು ಕಾರ್ಯಸೂಚಿಯಲ್ಲಿ ಸೇರಿಸಬೇಕು. ಆದ್ದರಿಂದ, ಪಾಲಿಕೆಯ ಆಯ-ವ್ಯಯ ಮತ್ತು ಸಾಮಾನ್ಯ ಸಭೆಯನ್ನು ಮುಂದೂಡಬೇಕು’ ಎಂದು ಮನವಿ ಮಾಡಲಾಗಿದೆ. 

ಪಾಲಿಕೆ ಸದಸ್ಯ ಪ್ರಭಂಜನ ಕುಮಾರ್‌ ಸೇರಿದಂತೆ ಹಲವು ಸದಸ್ಯರು ಆಯುಕ್ತರನ್ನು ಭೇಟಿಯಾಗಿ ಮನವಿ ನೀಡಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.