ADVERTISEMENT

ಬಳ್ಳಾರಿ ಜಿಪಂಗೆ ಮೊದಲ ಮಹಿಳಾ ಸಿಇಒ ನಂದಿನಿ

ಕೆ.ನಿತೀಶ್‌ಗೆ ಸ್ಥಳ ತೋರಿಸದೇ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 11:30 IST
Last Updated 25 ಆಗಸ್ಟ್ 2020, 11:30 IST
ಕೆ.ಆರ್.ನಂದಿನಿ
ಕೆ.ಆರ್.ನಂದಿನಿ   

ಬಳ್ಳಾರಿ: ಇಲ್ಲಿನ ಜಿಲ್ಲಾ ಪಂಚಾಯ್ತಿಯ ಮೊದಲ ಪೂರ್ಣಾವಧಿ ಮಹಿಳಾ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ 2017ರ ಬ್ಯಾಚಿನ ಐಎಎಸ್‌ ಅಧಿಕಾರಿ ಕೆ.ಆರ್‌.ನಂದಿನಿ ಅವರನ್ನು ರಾಜ್ಯ ಸರ್ಕಾರ ಮಂಗಳವಾರ ವರ್ಗಾವಣೆ ಮಾಡಿದೆ.

ಕೋಲಾರ ಮೂಲದ ನಂದಿನಿ, ತಿಪಟೂರು ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೇ ಮೊದಲ ಬಾರಿಗೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. 2019ರಲ್ಲಿ ಅವರು ಪ್ರೊಬೆಷನರಿ ಅಧಿಕಾರಿಯಾಗಿದ್ದಾಗ ಜಿಲ್ಲೆಯಲ್ಲಿ ಕೆಲವು ತಿಂಗಳು ತರಬೇತಿ ಪಡೆದಿದ್ದರು.

ಈ ಮುನ್ನ ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಡಾ.ಎನ್‌.ಮಂಜುಳಾ ಮತ್ತು ಗೌರಿ ತ್ರಿವೇದಿಯವರು ಪ್ರಭಾರಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ನಂತರ ಮಹಿಳೆಯೊಬ್ಬರನ್ನು ಪೂರ್ಣಾವಧಿಗೆ ಆ ಸ್ಥಾನಕ್ಕೆ ಇದುವರೆಗೂ ವರ್ಗಾವಣೆ ಮಾಡಿರಲಿಲ್ಲ.

ADVERTISEMENT

ಪ್ರಸ್ತುತ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಕೆ.ನಿತೀಶ್‌ ಅವರಿಗೆ ಯಾವುದೇ ಹುದ್ದೆ ತೋರಿಸದೇ ವರ್ಗಾಯಿಸಲಾಗಿದೆ. ಇತ್ತೀಚೆಗಷ್ಟೇ ಕೋವಿಡ್‌ ಸೋಂಕಿತರಾಗಿದ್ದ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೋಂ ಕ್ವಾರಂಟೈನ್‌ನಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.