ADVERTISEMENT

ಬಳ್ಳಾರಿ: ಕ್ವಿಂಟಲ್ ಶೇಂಗಾ ಬೆಲೆ ₹13,269

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 23:16 IST
Last Updated 28 ಜನವರಿ 2026, 23:16 IST
<div class="paragraphs"><p>ಶೇಂಗಾ</p></div>

ಶೇಂಗಾ

   

ಬಳ್ಳಾರಿ: ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಒಂದು ಕ್ವಿಂಟಲ್ ಶೇಂಗಾ ಬುಧವಾರ ಗರಿಷ್ಠ ದಾಖಲೆ ದರ ₹13,269ಕ್ಕೆ ಮಾರಾಟವಾಗಿದೆ.  

ಗಡಿಭಾಗದ, ಆಂಧ್ರ ಪ್ರದೇಶದ ಹಿರೇಹಾಳ್ ಮಂಡಲಂನ ಮಲ್ಲಿಕೇತಿ ಗ್ರಾಮದ ರೈತ ಹನುಮಂತ ತಂದ 45 ಚೀಲ (6 ಕ್ವಿಂಟಲ್‌) ಶೇಂಗಾ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಹೆಚ್ಚು ಬೆಲೆಗೆ ಮಾರಾಟವಾಗಿದೆ. 

ADVERTISEMENT

‘ಜ.23ರಂದು 1 ಕ್ವಿಂಟಲ್‌ ಶೇಂಗಾ ಗರಿಷ್ಠ ₹10,259ಕ್ಕೆ ಮಾರಾಟವಾಗಿತ್ತು. ದರ ₹11 ಸಾವಿರ ದಾಟಿದರೂ ಅಚ್ಚರಿಯಿಲ್ಲ’ ಎಂದು ವರ್ತಕರು ಮತ್ತು ಮಧ್ಯವರ್ತಿಗಳು ಹೇಳಿದ್ದರು. 

‘ಈ ಬಾರಿ ಫಸಲು ಕಡಿಮೆಯಾಗಿದೆ’ ಎಂದು ರೈತ ಹನುಮಂತ ಹೇಳಿದರು. ‘ಮಾರುಕಟ್ಟೆಗೆ ಶೇಂಗಾ ಹೆಚ್ಚು ಬರುತ್ತಿಲ್ಲ. ಬೇಡಿಕೆ ಹೆಚ್ಚಾಗಿದೆ’ ಎಂದು ವರ್ತಕ ಮರಿಬಸಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.