
ಪ್ರಜಾವಾಣಿ ವಾರ್ತೆ
ಸಾಂದರ್ಭಿಕ ಚಿತ್ರ
ಬಳ್ಳಾರಿ: ನಗರದ ಹೊರವಲಯದ ಮೋಕಾ ಗ್ರಾಮದಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 25 ಎತ್ತಿನ ಬಂಡಿಗಳು ಮತ್ತು 1 ಟ್ರ್ಯಾಕ್ಟರ್ ಅನ್ನು ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶನಿವಾರ ಮಧ್ಯರಾತ್ರಿ ವಶಕ್ಕೆ ಪಡೆದಿದ್ದಾರೆ .
ಮರಳು ಸಾಗಿಸಿ ಹಿಂದಿರುಗುತ್ತಿದ್ದ ಮೂರು ಖಾಲಿ ಗಾಡಿಗಳನ್ನೂ ವಶಕ್ಕೆ ಪಡೆಯಲಾಗಿದೆ. ಈ ವಾಹನಗಳನ್ನು ಬಳ್ಳಾರಿ ಗ್ರಾಮಾಂತರ ಠಾಣೆ ಆವರಣಕ್ಕೆ ತರಲಾಗಿತ್ತು. ಮರಳಿದ್ದ ವಾಹನಗಳಿಗೆ ₹6,500, ಖಾಲಿ ವಾಹನಗಳಿಗೆ ₹5,000 ದಂಡ ವಿಧಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಬಳ್ಳಾರಿ ಉಪ ವಿಭಾಗಾಧಿಕಾರಿ ರಾಜೇಶ, ಟಾಸ್ಕ್ ಫೋರ್ಸ್‌ನ ಸದಸ್ಯ ಕಾರ್ಯದರ್ಶಿ ನವೀನ್, ಗ್ರಾಮಾಂತರ ಠಾಣೆ, ಮೋಕಾ ಠಾಣೆಯ ಪೊಲೀಸರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.