
ಬಳ್ಳಾರಿ: ಸೈಬರ್ ಅಪರಾಧ, ಸಂಚಾರ ನಿಯಮ ಉಲ್ಲಂಘನೆ, ಮಾದಕ ದ್ರವ್ಯ ನಿಯಂತ್ರಣ ಸೇರಿದಂತೆ ಅಪರಾಧಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನೊಳಗೊಂಡ ಕ್ಯಾಲೆಂಡರ್ ಅನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಸೋಮವಾರ ಬಿಡುಗಡೆ ಮಾಡಿದರು.
‘ಪ್ರಜಾವಾಣಿ’ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಹೊರತಂದಿರುವ ಈ ಕ್ಯಾಲೆಂಡರ್‌ನಲ್ಲಿ ಹಲವು ಬಗೆಯ ಅಪರಾಧಗಳ ಕುರಿತು ಪ್ರತಿ ಪುಟದಲ್ಲಿ ಜನರನ್ನು ಜಾಗೃತಗೊಳಿಸುವ ಸಂದೇಶ, ಮಾಹಿತಿ ಇದೆ. ಈ ಕ್ಯಾಲೆಂಡರ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.
‘ಅಪರಾಧಗಳ ವಿರುದ್ಧ ಜನರನ್ನು ಜಾಗೃತರನ್ನಾಗಿಸುವ ವಿಶಿಷ್ಟ ಬಗೆಯ ಕ್ಯಾಲೆಂಡರ್ ಇದಾಗಿದೆ. ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಆಯ್ದ ಪ್ರದೇಶಗಳಲ್ಲಿ ಇದರ ವಿತರಣೆ ನಡೆಯಲಿದೆ’ ಎಂದು ಶೋಭಾರಾಣಿ ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಸಿಪಿಐ ಸತೀಶ್, 'ಪ್ರಜಾವಾಣಿ' ಬಳ್ಳಾರಿ, ವಿಜಯನಗರ ಜಿಲ್ಲೆಗಳ ಪ್ರಸರಣಾಧಿಕಾರಿ ಆನಂದ್ ದಂಡಿನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.