
ಬಳ್ಳಾರಿ: ತಾಲ್ಲೂಕಿನ ಮೋಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.
ಪಡಿತರ ಅಕ್ಕಿಯನ್ನು ಹಂದಿಹಾಳ ಗ್ರಾಮದಿಂದ ಬಳ್ಳಾರಿ ಕಡೆಗೆ ಹೋಗುವ ಮಾರ್ಗದ ವೇ-ಬ್ರಿಡ್ಜ್ ಬಳಿ ಲಗೇಜ್ ಆಟೋದಲ್ಲಿ ಇದ್ದ 45 ಕೆಜಿ ತೂಕದ 44 ಮೂಟೆಗಳಲ್ಲಿದ್ದ ಒಟ್ಟು ₹49,500 ಮೌಲ್ಯದ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಕೆ.ಕೆ.ಹಾಳ ಗ್ರಾಮ ಬಿ. ಶರಭಯ್ಯ, ಜಿ ರಾಮನಗೌಡ, ವಿನಯಕುಮಾರ್ ಎಸ್, ಸಾದಿಕ್ ಅಲಿ, ವಿ ಪ್ರಕಾಶ, ಕೆಂಚಪ್ಪ, ಜಾಲಪಾಟಿ ಮಾರೆಣ್ಣ ಇವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಳ್ಳಾರಿ ಗ್ರಾಮಾಂತರ ಆಹಾರ ನಿರೀಕ್ಷಕ ಸಿ. ಪಾಪಣ್ಣ ಮೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.