ADVERTISEMENT

ಬಳ್ಳಾರಿ: ಬೀದಿನಾಯಿ ದತ್ತು, ಪೋಷಣೆಗೆ ಪಾಲಿಕೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 4:53 IST
Last Updated 9 ಡಿಸೆಂಬರ್ 2025, 4:53 IST
<div class="paragraphs"><p>ಬೀದಿ ನಾಯಿ</p></div>

ಬೀದಿ ನಾಯಿ

   

(ಸಾಂದರ್ಭಿಕ ಚಿತ್ರ)

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿನಾಯಿಗಳನ್ನು ದತ್ತು ಪಡೆದು ಅವುಗಳನ್ನು ಪೋಷಣೆ ಮಾಡಲು ಇಚ್ಚಿಸುವವರು, ಪ್ರಾಣಿಗಳ ಸಂರಕ್ಷಣೆ ಸಂಕಲ್ಪ ಹೊಂದಿರುವವರು, ಪ್ರಾಣಿಗಳ ಮೇಲೆ ದಯೆ ಇರುವವರು ಬೀದಿನಾಯಿಗಳನ್ನು ದತ್ತು ಪಡೆಯಲು ಅಥವಾ ಆಶ್ರಯ ತಾಣದಲ್ಲಿರುವ ಬೀದಿನಾಯಿಗಳಿಗೆ ಆಹಾರ ಪೂರೈಸಲು ಇಚ್ಚಿಸುವವರು ಕೂಡಲೇ ಮಹಾನಗರ ಪಾಲಿಕೆ ಕಾರ್ಯಾಲಯಕ್ಕೆ ಸಂಪರ್ಕಿಸಬಹುದು. 

ADVERTISEMENT

ಬೀದಿನಾಯಿಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆಗುವ ತೊಂದರೆಯನ್ನು ನಿಯಂತ್ರಿಸಲು ಮಹಾನಗರ ಪಾಲಿಕೆಯು ನಾಯಿಗಳನ್ನು ಹಿಡಿದು ಅವುಗಳನ್ನು ಆಶ್ರಯ ತಾಣಕ್ಕೆ ಸಾಗಿಸುತ್ತಿದೆ. ಹಾಗಾಗಿ ಎನ್.ಜಿ.ಒ ಸಂಘ ಸಂಸ್ಥೆಗಳು, ಪ್ರಾಣಿದಯಾ ಸಂಘಗಳು ಹಾಗೂ ಇತರೆ ಪ್ರಾಣಿ ಪ್ರಿಯರಿದ್ದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಕಾರ್ಯಾಲಯಕ್ಕೆ ಸಂಪರ್ಕಿಸಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.