ADVERTISEMENT

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ: ಅವ್ವಾರು ಮಂಜುನಾಥ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 4:20 IST
Last Updated 10 ನವೆಂಬರ್ 2025, 4:20 IST
ಅವ್ವಾರು ಮಂಜುನಾಥ್‌
ಅವ್ವಾರು ಮಂಜುನಾಥ್‌   

ಬಳ್ಳಾರಿ: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅವ್ವಾರು ಮಂಜುನಾಥ್ ಅವರು ಅವಿರೋಧವಾಗಿ ಬುಧವಾರ ಆಯ್ಕೆಯಾಗಿದ್ದಾರೆ.

ಹಾಲಿ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಬುಧವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪದತ್ಯಾಗ ಮಾಡಿದರು.  ಆ ಬಳಿಕ ಹಿರಿಯ ಉಪಾಧ್ಯಕ್ಷ ಅವ್ವಾರು ಮಂಜುನಾಥ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಎಸ್. ದೊಡ್ಡನಗೌಡ ಹಿರಿಯ ಉಪಾಧ್ಯಕ್ಷರಾಗಿ, ಪಿ. ಪಾಲಣ್ಣ ಉಪಾಧ್ಯಕ್ಷರಾಗಿ, ನಾಗಳ್ಳಿ ರಮೇಶ್ ಖಜಾಂಚಿಯಾಗಿ ಆಯ್ಕೆಯಾದರು.

ADVERTISEMENT

ಗೌರವ ಕಾರ್ಯದರ್ಶಿಯಾಗಿ ಕೆ.ಸಿ. ಸುರೇಶಬಾಬು, ಉಪಾಧ್ಯಕ್ಷರಾಗಿ ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿಯಾಗಿ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ ಮತ್ತು ವಿ. ರಾಮಚಂದ್ರ ಮುಂದುವರೆದಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಯಶವಂತರಾಜ ನಾಗಿರೆಡ್ಡಿ ಮಾತನಾಡಿ, ‘ಸಂಸ್ಥೆಯು ವಜ್ರಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಸಂಸ್ಥೆಯ ಭವಿಷ್ಯ ಹಾಗೂ ಸಮರ್ಥ ನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಅಧಿಕಾರ ಹಸ್ತಾಂತರ ಮಾಡಲಾಗಿದೆ’ ಎಂದರು.

ಮಾಜಿ ಅಧ್ಯಕ್ಷ ಸಿ. ಶ್ರೀನಿವಾಸರಾವ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಎಸ್. ಸತ್ಯನಾರಾಯಣ, ಜೆ. ರಾಜೇಶ್, ನೇಕಾರ  ನಾಗರಾಜ್, ತಾಟಕೂರಿ ಶ್ರೀನಿವಾಸರಾವ್, ಪಿ. ಗಿರೀಶ್, ಎಸ್. ಜಿತೇಂದ್ರ ಪ್ರಸಾದ್, ಯು. ಗೋವಿಂದರೆಡ್ಡಿ, ಎಚ್. ರಾಜೇಶ್ ಕುಮಾರ್, ಎಸ್.ಪಿ. ವೆಂಕಟೇಶ್, ವಿ.ಕೆ.ಎಲ್. ದೀಪಕ್, ಆರ್. ನಾಗರಾಜ್, ಪಿ. ವೇಣುಗೋಪಾಲ್ ಗುಪ್ತ, , ಜಿ. ರಾಘವೇಂದ್ರ ರೆಡ್ಡಿ, ಬಿ. ನಾಗರಾಜ್ ಮತ್ತು ಕೆ. ಗೋಪಾಲರೆಡ್ಡಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.