ADVERTISEMENT

ವಿದ್ಯಾರ್ಥಿಗಳ ಮನಸೆಳೆದ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 14:49 IST
Last Updated 17 ಆಗಸ್ಟ್ 2023, 14:49 IST
ಕಂಪ್ಲಿಯಲ್ಲಿ ಕೊಪ್ಪಳದ ಕಲ್ಪುರ ಸಾಂಸ್ಕøತಿಕ ಸಂಘದಿಂದ ಪ್ರದರ್ಶನಗೊಂಡ ‘ಕೃಷ್ಣೆಗೌಡನ ಆನೆ’ ನಾಟಕದ ದೃಶ್ಯ
ಕಂಪ್ಲಿಯಲ್ಲಿ ಕೊಪ್ಪಳದ ಕಲ್ಪುರ ಸಾಂಸ್ಕøತಿಕ ಸಂಘದಿಂದ ಪ್ರದರ್ಶನಗೊಂಡ ‘ಕೃಷ್ಣೆಗೌಡನ ಆನೆ’ ನಾಟಕದ ದೃಶ್ಯ   

ಕಂಪ್ಲಿ: ಇಲ್ಲಿನ ವೀರಶೈವ ಭವನದಲ್ಲಿ ಕೊಪ್ಪಳದ ಕಲ್ಪುರ ಸಾಂಸ್ಕೃತಿಕ ಕಲಾ (ಕಲ್ಲೂರು) ಸಂಘದ ವತಿಯಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯ ಆಧಾರಿತ ನಾಟಕಗಳಾದ ‘ಬೆಪ್ಪತಕ್ಕಡಿ ಬೋಳೆ ಶಂಕರ’ ಮತ್ತು ‘ಕೃಷ್ಣೆಗೌಡನ ಆನೆ’ ನಾಟಕಗಳು ವಿದ್ಯಾರ್ಥಿಗಳ ಮನಸೂರೆಗೊಂಡವು.

ಕಲಾವಿದರಾದ ಉಮೇಶ್ ಧಾರವಾಡ, ಬಿಜಾಪುರದ ಶಾಂಭವಿ, ಕುಮಾರ್, ಪರಶುರಾಮ, ಶಿವು ಕೂಡ್ಲಿಗಿ, ಕೊಪ್ಪಳದ ಮಂಗೇಶ್, ರೇಷ್ಮಾ, ಶರಣ, ಪ್ರವೀಣ್ ಇನ್ನಿತರರು ಮನೋಜ್ಞವಾಗಿ ಅಭಿನಯಿಸಿದರು.

ವೀರೇಶ್ ರಾಯಚೂರು, ಲಕ್ಷ್ಮಣ ನಿರ್ದೆಶನದಲ್ಲಿ, ಡಿ. ಸೂರಿ ನೃತ್ಯ ಸಂಯೋಜನೆ ಮತ್ತು ಶರಣಶೆಟ್ಟರ್ ಸಂಯೋಜನೆಯಲ್ಲಿ ನಾಟಕ ಪ್ರದರ್ಶನಗೊಂಡವು.

ADVERTISEMENT

ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ಮದರ್ ತೆರೇಸಾ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಕೆ. ಜಡೆಪ್ಪ, ಉಪನ್ಯಾಸಕರಾದ ವಿಜಯಶಂಕರ್, ಬಸವರಾಜ, ರಾಜಾಸಾಬ್, ಖಾಸಿಂ, ಶಿವಾನಂದ್, ಸುರೇಶ್, ಭವಾನಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.